ನೆಲ್ಲೂರು ಕೆಮ್ರಾಜೆ,ಮರ್ಕಂಜ ಗ್ರಾಮ ವ್ಯಾಪ್ತಿಗೊಳಪಟ್ಟ ವಿಜಯ ಗ್ರಾಮಾಭಿವೃದ್ಧಿ ಸಮಿತಿ ಉದ್ಘಾಟನೆ

0

ಸುದ್ದಿ ಕೃಷಿ ಸೇವಾ ಕೇಂದ್ರದ ವತಿಯಿಂದ ಹಣ್ಣಿನ ಗಿಡಗಳನ್ನು ಬೆಳೆಯುವ ಬಗ್ಗೆ ಮಾಹಿತಿ ಕಾರ್ಯಗಾರ

ಬ್ಯಾಂಕ್ ಆಫ್ ಬರೋಡ,ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ರಿ. ಮಂಗಳೂರು, ಸುದ್ದಿ ಸಮೂಹ ಸಂಸ್ಥೆ ಸುಳ್ಯ, ನೆಲ್ಲೂರು ಕೆಮ್ರಾಜೆ ಪ್ರಾ.ಕೃ.ಪ.ಸ. ಸಂಘ, ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್, ಮರ್ಕಂಜ ಗ್ರಾಮ ಪಂಚಾಯತ್, ಶ್ರೀ ಶಾಸ್ತ್ರವು ಯುವಕ ಮಂಡಲ ರೇಂಜಾಳ ಇವುಗಳ ಜಂಟಿ ಆಶ್ರಯದಲ್ಲಿ ಅಕ್ಟೋಬರ್ 4ರಂದು ನೆಲ್ಲೂರು ಕೆಮ್ರಾಜೆ. ಮರ್ಕಂಜ ಗ್ರಾಮಗಳ ವ್ಯಾಪ್ತಿಗೊಳಪಟ್ಟ ವಿಜಯ ಗ್ರಾಮಾಭಿವೃದ್ಧಿ ಸಮಿತಿ ಇದರ ಉದ್ಘಾಟನೆ ಮತ್ತು ಸುಳ್ಯ ಸುದ್ದಿ ಕೃಷಿ ಸೇವಾ ಕೇಂದ್ರದ ವತಿಯಿಂದ ಪರ್ಯಾಯ ಕೃಷಿಯಲ್ಲಿ ಹಣ್ಣಿನ ಗಿಡ ಬೆಳೆಯುವ ತರಬೇತಿ ಮತ್ತು ಮಾರುಕಟ್ಟೆ ಮಾಹಿತಿ ಕಾರ್ಯಗಾರ ಮರ್ಕಂಜ ಗ್ರಾಮದ ರೇಂಜಾಳ ವಿನಾಯಕ ಸಭಾಭವನದಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯ ಗ್ರಾಮಾಭಿವೃದ್ಧಿ ಪ್ರತಿಷ್ಠಾನ ರಿ. ಮಂಗಳೂರು ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಚಿನ್ ಹೆಗ್ಡೆ ವಹಿಸಿದ್ದರು. ಬ್ಯಾಂಕ್ ಆಫ್ ಬರೋಡ ಪುತ್ತೂರು ಕ್ಷೇತ್ರ ಉಪ ಪ್ರಾದೇಶಿಕ ವ್ಯವಸ್ಥಾಪಕರಾದ ಮೂರ್ತಿ ಎಚ್ಎಂ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಸುದ್ದಿ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕರಾದ ಡಾ ಯು ಪಿ ಶಿವಾನಂದ, ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಮೇಶ್ ದೇಲಂಪಾಡಿ, ನೆಲ್ಲೂರು ಕೆಮ್ರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಿಷ್ಣು ಭಟ್ ಮೂಲೆ ತೋಟ ಉಪಸ್ಥಿತರಿದ್ದರು.


ಗೌರವ ಉಪಸ್ಥಿತರಾಗಿ ನೆಲ್ಲೂರು ಕೆಮ್ರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಧನಂಜಯ ಕೋಟೆಮೂಲೆ, ಮರ್ಕಂಜ ಗ್ರಾಮ ಪಂಚಾಯತ್ ಅಧ್ಯಕ್ಷ ಗೀತಾ ಹೊಸಳಿಕೆ, ದೊಡ್ಡ ತೋಟ ಶಾಖೆ ಮ್ಯಾನೇಜರ್ ಎನ್ ಉದಯಕುಮಾರ್, ಮರ್ಕಂಜ ಶ್ರೀ ಕಾವೂರು ಮಹಾ ವಿಷ್ಣು ವಗೈರೆ ಪಂಚಸ್ಥಾಪನೆಗಳ ಅಧ್ಯಕ್ಷ ರಾಘವ ಗೌಡ ಕಂಜಿಪಿಲಿ,ರೆಂಜಾಳ ಶಾಸ್ತಾವು ಯುವಕ ಮಂಡಲ ಅಧ್ಯಕ್ಷ ಶಶಿಕಾಂತ ಗುಳಿಗಮೂಲೆ, ಜಾಲಸೂರು ವಿಜಯ ಗ್ರಾಮೀಣ ಅಭಿವೃದ್ಧಿ ಸಮಿತಿ ಅಧ್ಯಕ್ಷ ಯಶ್ವಿತ್ ಕಾಳಮ್ಮನೆ ಉಪಸ್ಥಿತರಿದ್ದರು. ಹಣ್ಣಿನ ಗಿಡಗಳ ಬಗ್ಗೆ ಹಣ್ಣು ಬೆಳೆಯ ತಜ್ಞ ದಯಾ ಪ್ರಸಾದ್ ಚೀಮಳ್ಳು ಮಾಹಿತಿ ನೀಡಿದರು.