ಮಠಾಧಿಪತಿಗಳು ಮಾಡದ ಅಭೂತಪೂರ್ವ ಕಾರ್ಯ ಧರ್ಮಸ್ಥಳ ಕ್ಷೇತ್ರದಲ್ಲಾಗಿದೆ. ಡಾ.ವೀರೇಂದ್ರ ಹೆಗ್ಗಡೆಯವರು ಎಲ್ಲಾ ಧರ್ಮದ ಧರ್ಮಾಧಿಕಾರಿಗಳು : ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ನ 25 ನೇ ವರ್ಷದ ಭಜನಾ ತರಬೇತಿ ಕಮ್ಮಟದ ಸಮಾರೋಪ ಸಮಾರಂಭ ಅ.4 ರಂದು ಅಮೃತ ವರ್ಷಿಣಿ ಸಭಾಂಗಣದಲ್ಲಿ ನಡೆಯಿತು.
ಬೆಳಗ್ಗೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಭಜನಾ ತಂಡದ ಆಕರ್ಷಕ ಮೆರವಣಿಗೆಯು ಕ್ಷೇತ್ರದ ಮಂಜುನಾಥ ದೇವಾಲಯಕ್ಕೆ ಸುತ್ತು ಬಂದು ಪ್ರಮುಖ ಬೀದಿ ಗಳಲ್ಲಿ ಸಾಗಿ ಬಂತು.
ಬಳಿಕ ನಡೆದ ಸಮಾರಂಭಕ್ಕೆ ಹೂವಿನಿಂದ ಅಲಂಕೃತ ರಥದಲ್ಲಿಡಾ.ಡಿ.ವೀರೇಂದ್ರ ಹೆಗ್ಗಡೆ ಯವರ ಉಪಸ್ಥಿತಿಯಲ್ಲಿ ಮುಖ್ಯ ಅಭ್ಯಾಗತರನ್ನು ಅಮೃತ ವರ್ಷಿಣಿ ಸಭಾ ಮಂಟಪದವರೆಗೆ ಕರೆದುಕೊಂಡು ಬರಲಾಯಿತು.
ವೇದಿಕೆಯಲ್ಲಿ ಮನ್ಮಹಾರಾಜ ನಿರಂಜನ ಜಗದ್ಗುರು ಡಾ.ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿ ಜಗದ್ಗುರು ಮೂರು ಸಾವಿರ ಮಠದ ಮಹಾಸಂಸ್ಥಾನದ ಸ್ವಾಮೀಜಿ ಆಶೀರ್ವಚನ ನೀಡಿದರು. ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಯವರು ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಸಭಾ ಸದಸ್ಯ ಚಲನಚಿತ್ರ ಸಂಗೀತ ನಿರ್ದೇಶಕರಾದ ಇಳಯರಾಜ, ಭಜನಾ ಪರಿಷತ್ ಉಪಾಧ್ಯಕ್ಷ ರಾದ ಡಾ.ಹೇಮಾವತಿ ವಿ ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಶ್ರೀಮತಿ ಸುಪ್ರಿಯಾ ಹೆಗ್ಗಡೆ, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಹೀರೆಮಗಳೂರು ಕಣ್ಣನ್, ಪರಿಷತ್ ರಾಜ್ಯಾಧ್ಯಕ್ಷ ಬಾಲಕೃಷ್ಣ ಪಂಜ, ಸಾಹಿತಿ ಪ್ರದೀಪ್ ಕಲ್ಕೂರ ವೇದಿಕೆಯಲ್ಲಿದ್ದರು.
ಸಾವಿರಾರು ಸಂಖ್ಯೆಯಲ್ಲಿ ಭಜಕರು ಸೇರಿದ್ದರು.