ಅರಂತೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ತೊಡಿಕಾನ ಗ್ರಾಮದ ನೂಜಿಕಲ್ಲು ಎಂಬಲ್ಲಿ ರಸ್ತೆಯ ಬದಿಯಲ್ಲಿ ಮೂರು ಚೀಲಗಳಲ್ಲಿ ಸುಳ್ಯ ನಗರದ ನಿವಾಸಿಯೊಬ್ಬರು ತ್ಯಾಜ್ಯ ಎಸೆದಿದ್ದು, ಅವರನ್ನು ಪತ್ತೆ ಹಚ್ಚಿ ಅರಂತೋಡು ಗ್ರಾಮ ಪಂಚಾಯತಿ ವತಿಯಿಂದ ದಂಡ ವಿಧಿಸಿದ ಘಟನೆ ಅ.4ರಂದು ನಡೆದಿದೆ.
ತೊಡಿಕಾನ ಗ್ರಾಮದ ನೂಜಿಕಲ್ಲು ಪ್ರದೇಶದಲ್ಲಿ ರಸ್ತೆ ಬದಿ ತ್ಯಾಜ್ಯ ಎಸೆದವರನ್ನು ಅರಂತೋಡು ಗ್ರಾಮ ಪಂಚಾಯಿತಿಯ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣ ತಂಡವು ಪತ್ತೆಹಚ್ಚಿದ್ದು, ಪರಿಶೀಲನೆ ನಡೆಸಿ ಅರಂತೋಡು ಗ್ರಾಮ ಪಂಚಾಯತಿ ವತಿಯಿಂದ ನಾಲ್ಕು ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.
ಅರಂತೋಡು ಗ್ರಾಮ ಪಂಚಾಯತ್ ಸ್ವಚ್ಛ ಗ್ರಾಮ ಪಂಚಾಯತಾಗಿ ಘೋಷಿಸಲ್ಪಟ್ಟಿದ್ದು, ತ್ಯಾಜ್ಯ ಎಸೆದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗಿದೆ.