ಪೆರಾಜೆ ಜ್ಯೋತಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಕ್ರೀಡಾ ಕೂಟದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

0

ಮಡಿಕೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಪೆರಾಜೆ ಜ್ಯೋತಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಹ್ಯಾಮರ್ ಥ್ರೋ ನಲ್ಲಿ 9ನೇ ತರಗತಿ ಸಚಿನ್ ಕೆ. ಪ್ರಥಮ ಸ್ಥಾನ ಹಾಗೂ 10ನೇ ತರಗತಿ ನಿಶಾ ಬಿ.ಎಲ್. ಜಾವೇಲಿನ್ ಥ್ರೋ ನಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಬೇಬಿ ಎ. ರವರು ತರಬೇತಿ ನೀಡಿದ್ದಾರೆ.
ಸಚಿನ್ ಪೆರಾಜೆಯ ಕರುಣಾಕರ ಮತ್ತು ಚಂದ್ರಿಕಾ ದಂಪತಿಯ ಪುತ್ರ. ನಿಶಾ ಬಿ. ಎಲ್. ಬಂಗಾರಕೋಡಿ ದಿ. ಲಕ್ಷ್ಮಣ ಬಿ. ಮತ್ತು ವಿಧಾಕುಮಾರಿ ದಂಪತಿಯ ಪುತ್ರಿ.