ಸುಬ್ರಹ್ಮಣ್ಯ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಇನ್ನರ್ ವೀಲ್ ಕ್ಲಬ್ ಗಳು ಜಂಟಿಯಾಗಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಬೀಜ ಬಿತ್ತುವ ಹಾಗೂ ಬೃಹತ್ ಸ್ವಚ್ಛತಾ ಅಭಿಯಾನವನ್ನು ಅ.8 ರಂದು ಕೈಗೊಳ್ಳಲಾಯಿತು.
ಕುಲ್ಕುಂದ ಶ್ರೀ ಚಾಮುಂಡೇಶ್ವರಿ ಗಡಿಯಲ್ಲಿ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ವಿಮಲ್ ಬಾಬು ಅವರು ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿರುವರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಮಲ್ ಬಾಬು ಅವರು” ಇಂದಿನ ದಿನಗಳಲ್ಲಿ ನಾವುಗಳು ಅರಣ್ಯ ಪೋಷಿಸುವ ಬಗ್ಗೆ ,ಬೆಳೆಸುವ ಬಗ್ಗೆ ,ಹಾಗೂ ಕಾಪಾಡುವ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದರೊಂದಿಗೆ ಸ್ವಚ್ಛತೆಗೆ ಹೆಚ್ಚಿನ ಗಮನಹರಿಸಬೇಕಾಗಿದೆ. ಆ ನಿಟ್ಟಿನಲ್ಲಿ ಎಲ್ಲ ಸಂಘ-ಸಂಸ್ಥೆಗಳು ಸೇರಿದಾಗ ಇಂತಹ ಅಭಿಯಾನಗಳು ಹೆಚ್ಚು ಫಲಪ್ರದವಾಗುತ್ತದೆ” ಎಂದರು. ಮುಖ್ಯ ಅತಿಥಿಗಳಾಗಿ ರೋಟರಿ ಜಿಲ್ಲೆ 3181ರ ವಲಯ5 ರ ಅಸಿಸ್ಟೆಂಟ್ ಗವರ್ನರ್ ಪುರಂದರ ರೈ ಹಾಗೂ ಲಯನ್ಸ್ ಜಿಲ್ಲೆ 317 ಇದರ ವಲಯ ಪ್ರಾಂತೀಯ ಅಧ್ಯಕ್ಷ ರೇಣುಕಾ ಸದಾನಂದ ಬೃಹತ್ ಗಿಡ ನೆಡುವ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಹಸಿರು ನಿಶಾನೆಯನ್ನು ತೋರಿಸಿದರು.
ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಪ್ರಶಾಂತ್ ಕೋಡಿಬೈಲು ಅಧ್ಯಕ್ಷತೆ ವಹಿಸಿದ್ದರು .ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಚಂದ್ರ ಪಳಂಗಾಯ , ಇನ್ನರ್ ವೀಲ್ ಅಧ್ಯಕ್ಷ ವೇದ ಶಿವರಾಂ ಎನೆಕಲ್, ಲಯನ್ಸ್ ಕಾರ್ಯದರ್ಶಿ ಸತೀಶ ಕೂಜುಗೋಡು, ಲಯನ್ಸ್ ಖಜಾಂಜಿ ಚಂದ್ರಶೇಖರ ಪಾನತ್ತಿಲ ಉಪಸ್ಥಿತರಿದ್ದರು. ರೋಟರಿ ಕ್ಲಬ್ ಪೂರ್ವ ಅಧ್ಯಕ್ಷ ವಿಶ್ವನಾಥ ನಡುತೋಟ ಕಾರ್ಯಕ್ರಮ ನಿರೂಪಿಸಿದರು. ಇನ್ನರ್ ವೀಲ್ ಅಧ್ಯಕ್ಷೆ ವೇದ ಶಿವರಾಮ್ ಧನ್ಯವಾದ ಸಮರ್ಪಿಸಿದರು.
ಕಾಡಿನೆಡೆಗೆ ನಮ್ಮ ನಡಿಗೆ ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು ಇದರಲ್ಲಿ ರೋಟರಿ ಸದಸ್ಯರು, ಲಯನ್ಸ್ ಸಂಸ್ಥೆ ಸದಸ್ಯರು, ಇನ್ನರ್ ವೀಲ್ ಸದಸ್ಯರು ,ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು. ಕುಲ್ಕುಂದ ಚಾಮುಂಡೇಶ್ವರಿ ಗಡಿಯಿಂದ ಆರಂಭವಾದ ಗಿಡ ನೆಡುವ ಹಾಗೂ ಸ್ವಚ್ಛತಾ ಕಾರ್ಯಕ್ರಮ ಬಿಸಿಲೆವರೆಗೆ ಸಾಗಿ ಅಲ್ಲಿ ಸಮಾಪ್ತಿಗೊಂಡಿತು.