ಕುಡ್ಲ ಫ್ಯಾಶನ್ ಶೋ ಸ್ಪರ್ಧೆಯಲ್ಲಿ ಸಮೃದ್ಧಿಗೆ ‘ಬ್ಯೂಟಿ ಆಫ್ ಕುಡ್ಲ’ ಕಿರೀಟ

0

ಇತ್ತೀಚೆಗೆ ಮಂಗಳೂರಿನ ಈಡನ್ ಕ್ಲಬ್ ನಲ್ಲಿ ನಡೆದ
ಕುಡ್ಲ ಫ್ಯಾಶನ್ ಲ್ಲಿ ಸಮೃದ್ಧಿ ಎಸ್. ‘ಬ್ಯೂಟಿ ಆಫ್ ಕುಡ್ಲ’ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾಳೆ.

ಹಿರಿಯರ ಮತ್ತು ಕಿರಿಯರ ವಿಭಾಗದಲ್ಲಿ ನಡೆದ ಪ್ರತ್ಯೇಕ ಸ್ಪರ್ಧೆಯಲ್ಲಿ ಈಕೆ ಕಿರಿಯರ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿದ್ದಾಳೆ.

ಫ್ಯಾಷನ್ ವೈವಿಧ್ಯತೆಯನ್ನು ಬಿಂಬಿಸುವುದಲ್ಲದೆ ಜಾಗೃತಿಯನ್ನು ಮೂಡಿಸುವ ಅಪರೂಪದ ಕಾರ್ಯಕ್ರಮ ಇದಾಗಿದ್ದು,
ವಿಶೇಷ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಕುಡ್ಲ ಫ್ಯಾಶನ್ ಶೋ ಕಾರ್ಯಕ್ರಮದಿಂದ ಗಳಿಸಿದ ಹಣವನ್ನು ನೀಡುತ್ತಿದ್ದಾರೆ.

ಈಕೆ ಗೂನಡ್ಕ ಬೀಜದಕಟ್ಟೆ ನಿವಾಸಿ ಸದಾನಂದ ಮತ್ತು ಸುಳ್ಯ ನಗರ ಪಂಚಾಯತ್ ಉದ್ಯೋಗಿ ಶ್ರೀಮತಿ ಆಶಾ ಬಿ.ಆರ್ ದಂಪತಿಗಳ ಪುತ್ರಿ. ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗೂನಡ್ಕ ಇಲ್ಲಿಯ ಒಂದನೇ ತರಗತಿ ವಿದ್ಯಾರ್ಥಿನಿ.