ಅ.22: ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ದುರ್ಗಾಪೂಜೆ ಮತ್ತು ಆಯುಧಪೂಜೆ

0


ದುಗ್ಗಲಡ್ಕದ ಶ್ರೀ ದುಗ್ಗಲಾಯ ದೇವಸ್ಥಾನದಲ್ಲಿ ದುರ್ಗಾಷ್ಠಮಿಯ ದಿನವಾದ ಅ.22ರಂದು ದುರ್ಗಾಪೂಜೆ, ಆಯುಧಪೂಜೆ ಮತ್ತು ತೆನೆಹಬ್ಬ ನಡೆಯಲಿದೆ.
ಬೆಳಿಗ್ಗೆ 9 ಗಂಟೆಗೆ ದುರ್ಗಾಪೂಜೆ ಪ್ರಾರಂಭ, 10ರಿಂದ ಆಯುಧಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಪ್ರಸಾದ ಭೋಜನ ನಡೆಯಲಿದೆ. ಭಕ್ತಾಧಿಗಳು ಕಾರ್ಯಕ್ರಮವನ್ನು ಪಾಲ್ಗೊಳ್ಳಬೇಕೆಂದು ಆಡಳಿತ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ವಿನಂತಿಸಿದ್ದಾರೆ.