ಕ್ಯಾಂಪ್ಕೋ ನಿಯಮಿತ ಮಂಗಳೂರು ಸಂಸ್ಥೆಯ ಆಡಳಿತ ಮಂಡಳಿಯ ಹೊಸ ನಿರ್ಧಾರದಂತೆ ಪ್ರಥಮ ಬಾರಿಗೆ ಸಂಸ್ಥೆಯ ಸಕ್ರಿಯ ಸದಸ್ಯರ ಕುಟುಂಬದವರ ಕೃಷಿ ವಿಜ್ಞಾನಕ್ಕೆ ಸಂಬಂಧಿಸಿದ ಉನ್ನತ ವ್ಯಾಸಂಗಕ್ಕೆ ನೀಡಲಾಗುವ ರೂ.1ಲಕ್ಷ ಸ್ಕಾಲರ್ ಶಿಫ್ ಪ್ರಥಮ ಕಂತಿನ ಹಣವಾದ ಐವತ್ತು ಸಾವಿರ ಚೆಕ್ಕನ್ನು ಕ್ಯಾoಪ್ಕೋ ಸಂಸ್ಥೆಯ ನಿಂತಿಕಲ್ಲು ಶಾಖೆಯ ಸಕ್ರಿಯ ಸದಸ್ಯ ಲಕ್ಷ್ಮಿನಾರಾಯಣ ನಡ್ಕರವರ ಪುತ್ರಿ ಪೌರ್ಣಮಿ ನಡ್ಕ ರವರ ಗುಜರಾತ್ ಜುನಾಗಢ್ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ವಿಜ್ಞಾನದಲ್ಲಿ MSc ಸ್ನಾತಕೋತ್ತರ ಶಿಕ್ಷಣಕ್ಕಾಗಿ ಅ.12 ರಂದು ಕ್ಯಾಂಪ್ಕೋ ನಿಂತಿಕಲ್ಲು ಶಾಖೆಯಲ್ಲಿ ಸಂಸ್ಥೆಯ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ ರವರು ಲಕ್ಸ್ಮಿನಾರಾಯಣ ನಡ್ಕರವರಿಗೆ ಹಸ್ತಾoತರಿಸಿದರು.
ಈ ಸಂದರ್ಭದಲ್ಲಿ ಕ್ಯಾಂಪ್ಕೋ ಸಂಸ್ಥೆಯ ಮುಖ್ಯ ಪ್ರಭಂದಕ ಜಯರಾಮ್ ಶೆಟ್ಟಿ, ನಿಂತಿಕಲ್ಲು ಶಾಖಾ ಪ್ರಭಂದಕ ರಮೇಶ್. ಡಿ. ಹಾಗೂ ಸಿಬ್ಬಂದಿ ರಮೇಶ್ ಕುಮಾರ್ ವಿ. ಮತ್ತು ಕಾಳುಮೆಣಸು ವಿಭಾಗದ ನಿತಿನ್ ಕೋಟ್ಯಾನ್ ಉಪಸ್ಥಿತರಿದ್ದರು.