ಪಂಜ ಲಯನ್ಸ್ ಕ್ಲಬ್ ಗೆ ಪ್ರಾಂತೀಯ ಅಧ್ಯಕ್ಷರ ಅಧಿಕೃತ ಭೇಟಿ ಕಾರ್ಯಕ್ರಮ ಅ.14ರಂದು ಪಡ್ಪಿನಂಗಡಿ ನಡ್ಕ ಶಿವಗೌರಿ ಕಲಾಮಂದಿರದಲ್ಲಿ ಜರುಗಿತು.
ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ಸಭಾಧ್ಯಕ್ಷತೆ ವಹಿಸಿದ್ದರು. ಪ್ರಾಂತೀಯ ಅಧ್ಯಕ್ಷೆ ಶ್ರೀಮತಿ ರೇಣುಕಾ ಸದಾನಂದ ಜಾಕೆ ದೀಪ ಬೆಳಗಿಸಿ ಮಾತನಾಡಿ”ಪಂಜ ಲಯನ್ಸ್ ಕ್ಲಬ್ ಫೀಸ್ ಪೋಸ್ಟರ್ ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಕೊಂಡಿರುವ ಕ್ಲಬ್.ಉತ್ತಮ ಕಾರ್ಯಕ್ರಮಗಳನ್ನು
ನೀಡುತಾ ವಿಶೇಷ ಸ್ಥಾನ ಗಳಿಸಿ ಕೊಂಡ ಸಂಸ್ಥೆ” ಎಂದು “.
ಶುಭ ಹಾರೈಸಿದರು.
ಪ್ರಾಂತೀಯ ಪ್ರಥಮ ಲಯನ್ ಸದಾನಂದ ಜಾಕೆ,
ವಲಯ ಅಧ್ಯಕ್ಷ ಸಂತೋಷ್ ಜಾಕೆ, ಪ್ರಾಂತೀಯ ಸಂಯೋಜಕ ಡಾ.ಪ್ರಕಾಶ್ ಡಿ’ಸೋಜ, ಝೋನ್ ಕೊರ್ಡಿನೇಟರ್ ತೋಮಸ್, ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ವೀರಪ್ಪ ಗೌಡ ಕಣ್ಕಲ್, ಸಂಪಾಜೆ ಲಯನ್ಸ್ ಕ್ಲಬ್ ಅಧ್ಯಕ್ಷ ಯೋಗೇಶ್ವರ್, ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಚಂದ್ರ ಪಳಂಗಾಯ, ಗುತ್ತಿಗಾರು ಲಯನ್ಸ್ ಕ್ಲಬ್ ಅಧ್ಯಕ್ಷ ಜಯರಾಮ ಕಡ್ಲಾರ್, ಪಂಜ ಲಯನ್ಸ್ ಕ್ಲಬ್ ನಿಕಟ ಪೂರ್ವಾಧ್ಯಕ್ಷ ಪುರುಷೋತ್ತಮ ದಂಬೆಕೋಡಿ, ಕಾರ್ಯದರ್ಶಿ ವಾಸುದೇವ ಮೇಲ್ಪಾಡಿ, ಕೋಶಾಧ್ಯಕ್ಷ ಆನಂದ ಜಳಕದಹೊಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಪ್ರಾಂತೀಯ ಅಧ್ಯಕ್ಷೆ ಶ್ರೀಮತಿ ರೇಣುಕಾ ಸದಾನಂದ ಜಾಕೆ ಮತ್ತು ಸದಾನಂದ ಜಾಕೆ ದಂಪತಿಗಳ ಸನ್ಮಾನಿಸಲಾಯಿತು. ಸೀತಾರಾಮ ಗೌಡ ಕುದ್ವ ಸನ್ಮಾನಿಸಿದರು. ಈ ವೇಳೆ ಶ್ರೀಮತಿ ರಮ್ಯಾ ದಿಲೀಪ್ ಬಾಬ್ಲುಬೆಟ್ಟು ಉಪಸ್ಥಿತರಿದ್ದರು.
ಸೇವಾ ಕಾರ್ಯಗಳು:
ರವಿರಾಜ ಎಂಬವರ ಚಿಕಿತ್ಸೆಗೆ ಧನ ಸಹಾಯ.ನಾಗತೀರ್ಥ ಶಾಲೆಗೆ ಪ್ರಿಂಟರ್ ಕೊಡುಗೆ. ಬಡ ಕುಟುಂಬಕ್ಕೆ ಅಕ್ಕಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮೋಹನ್ ಎಣ್ಮೂರು ವೇದಿಕೆಗೆ ಆಹ್ವಾನಿಸಿದರು. ದಿಲೀಪ್ ಬಾಬ್ಲುಬೆಟ್ಟು ಸ್ವಾಗತಿಸಿದರು.
ಪ್ರಶಾಂತ್ ಮುರುಳ್ಯ ಲಯನ್ಸ್ ಪ್ರಾರ್ಥನೆ ಮಾಡಿದರು.ಮೋಹನ್ ಕೂಟಾಜೆ ಧ್ವಜ ವಂದನೆ ಮಾಡಿದರು.ವಾಸುದೇವ ಮೇಲ್ಪಾಡಿ ವರದಿ ವಾಚಿಸಿದರು.ಶಶಿಧರ ಪಳಂಗಾಯ,
ಕರುಣಾಕರ ಎಣ್ಣೆಮಜಲು ಅತಿಥಿಗಳ ಪರಿಚಯ, ಸೇವಾ ಕಾರ್ಯಗಳ ನಿರ್ವಹಣೆಗೆ ಮಾಡಿದರು. ಆನಂದ ಜಳಕದಹೊಳೆ ವಂದಿಸಿದರು.