ಅ. 23ರ ತನಕ ಬೆಳ್ಳಾರೆ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದ ಅಮ್ಮನವರ ಸನ್ನಿಧಿಯಲ್ಲಿ ಶ್ರೀ ನವರಾತ್ರಿ ಮಹೋತ್ಸವ, ಉತ್ಸವಕ್ಕೆ ಚಾಲನೆ

0

ಬೆಳ್ಳಾರೆಯ ಶ್ರೀ ಲಕ್ಷ್ಮೀವೆಂಕಟ್ರಮಣ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವಗಳು ಅ. 15ರಿಂದ ಅ. 23ರ ತನಕ ನಡೆಯಲಿದ್ದು,
ಅ. 15ರಂದು ಬೆಳಿಗ್ಗೆ ದೇವಸ್ಥಾನದ ಅರ್ಚಕರಾದ ಅಣ್ಣು ಭಟ್ ದೀಪೋಜ್ವಲನಗೊಳಿಸಿ ಉತ್ಸವಕ್ಕೆ ಚಾಲನೆ ನೀಡಿದರು. ದೇವಸ್ಥಾನದ ಮೊಕ್ತೇಸರರಾದ ಯಂ. ಗೋಪಾಲಕೃಷ್ಣ ಶ್ಯಾನುಭಾಗ್, ಬಿ. ಸುರೇಶ್ ಪೈ, ಬಿ. ಕೃಷ್ಣ ಪೈ, ಬಿ. ಅಶೋಕ್ ಪೈ, ಬಿ. ಮಿಥುನ್ ಶೆಣೈ, ಸುದರ್ಶನ ಮಲ್ಯ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನವರಾತ್ರಿಯ ಪ್ರತೀ ದಿನ ಮಧ್ಯಾಹ್ನ 12.00 ಗಂಟೆಯಿಂದ ಉಭಯ ದೇವರಿಗೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.