ಅ.20 ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹೊಸ್ತಾರೋಗಣೆ ಕಾರ್ಯಕ್ರಮ

0

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅ. 20ರಂದು ಹೊಸ್ತಾರೋಗಣೆ ಕಾರ್ಯಕ್ರಮ ನಡೆಯಲಿದೆ.

ದೇವರಿಗೆ ಮಹಾಭಿಷೇಕ ಕದಿರು ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಪ್ರಾತ:ಕಾಲ 5.15 ಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಭಿಷೇಕ, 7.30 ಕ್ಲೆ ಕದಿರು ತರುವುದು ಹಾಗೂ ಕದಿರು ಪೂಜೆ ನಡೆಯಲಿರುವುದು. ಬೆಳಗ್ಗೆ 8 ರ ಬಳಿಕ ದೇವಳದ ನೌಕರರಿಗೆ ಮತ್ತು ಸ್ಥಳೀಯ ಭಕ್ತರಿಗೆ ಕದಿರು ವಿತರಣೆ ನಡೆಯಲಿದೆ. ದೇವರ ದರ್ಶನ ಬೆಳಗ್ಗೆ 10 ಗಂಟೆ ಬಳಿಕ ಆರಂಭವಾಗುವುದಾಗಿ ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.