ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಸೆ.15 ರಂದು ದಸರಾ ಪ್ರಯುಕ್ತ ಗೊಂಬೆ ಉತ್ಸವ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಸುದ್ದಿ ಚಾನೆಲ್ ಮುಖ್ಯಸ್ಥ ದುರ್ಗಾ ಕುಮಾರ್ ನಾಯರ್ ಕೆರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಸುಳ್ಯದಲ್ಲಿ ಪ್ರಪ್ರಥಮವಾಗಿ ಆಚರಿಸುತ್ತಿರುವ ಗೊಂಬೆ ಹಬ್ಬ ಹಾಗೂ ಶಾಲೆಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಇನ್ನೋರ್ವ ಅತಿಥಿಗಳಾದ ಡಾ.ಸಾಯಿಗೀತಾ ಜ್ಞಾನೇಶ್ ಅವರು ದೇವಿಯ ಭಜನೆ ಹಾಡಿ ವಿಜಯದಶಮಿಯ ಬಗ್ಗೆ ತಿಳಿಸಿಕೊಟ್ಟರು. ಸಂಸ್ಥೆಯ ಸಂಚಾಲಕಿ ಶ್ರೀಮತಿ ಗೀತಾಂಜಲಿ ಟಿ.ಜಿ ಅವರು ಗೊಂಬೆ ಹಬ್ಬದ ವಿಶೇಷ ಮತ್ತು ಮಹತ್ವದ ಕುರಿತು ಮಾಹಿತಿ ನೀಡಿದರು.
ಶುಭಕರ ಬಿ. ಸಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದು, ನಿರಾಕಾರ ರೂಪದ ಗೊಂಬೆಗಳಿಗೆ ಅಲಂಕಾರ ಮಾಡಿದಾಗ ಹೇಗೆ ಸಕಾರ ರೂಪವನ್ನು ಪಡೆಯುತ್ತವೆ ಎಂದು ತಿಳಿಸಿಕೊಟ್ಟರು. ವೇದಿಕೆಯಲ್ಲಿ ಸಂಸ್ಥೆಯ ಪೋಷಕ ಪ್ರತಿನಿಧಿಯಾದ ಶುಶಾನ್ ಉಪಸ್ಥಿತರಿದ್ದು ಸ್ವಾಗತಿಸಿದರು.
ಕಾರ್ಯಕ್ರಮದ ನಂತರ ರಂಗೋಲಿ ಹಾಗೂ ವೆಜಿಟೇಬಲ್ ಕಾರ್ವಿಂಗ್ ಸ್ಪರ್ಧೆಯನ್ನು ಪೋಷಕರಿಗೆ ಆಯೋಜಿಸಲಾಗಿತ್ತು. ಸಂಸ್ಥೆಯ ಪೋಷಕರಾದ ಶ್ರೀಮತಿ. ಪ್ರಮೀಳಾ ಪ್ರಾರ್ಥನೆ ಗೈದು, ಶ್ರೀಮತಿ ರಕ್ಷಿತಾ ವಂದಿಸಿದರು. ಸಂಸ್ಥೆಯ ಶಿಕ್ಷಕಿ ಶ್ರೀಮತಿ ನಿರ್ಮಲ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಗೊಂಬೆ ಹಬ್ಬವನ್ನು ಸಾರ್ವಜನಿಕರಿಗೆ ನೋಡಲು ೩ ದಿನಗಳ ಕಾಲ ಮುಕ್ತ ಅವಕಾಶವಿರುತ್ತದೆ.