ಶ್ರೀ ಶಾರದೋತ್ಸವ ಸಮಿತಿ ಬೆಳ್ಳಾರೆ ವತಿಯಿಂದ 36 ನೇ ವರ್ಷದ ಶ್ರೀ ಶಾರದೋತ್ಸವವು ಅ.24 ರಂದು ಬೆಳ್ಳಾರೆ ಅಚಲಾಪುರ ಕಟ್ಟೆಯ ಬಳಿ ನಡೆಯಲಿದೆ.
ಬೆಳಿಗ್ಗೆ ಗಂಟೆ 8.30 ಕ್ಕೆ ಶಾರದಾ ಪ್ರತಿಷ್ಠೆ,ಪೂಜೆ ನಡೆಯಲಿದೆ.
ಬೆಳಿಗ್ಗೆ ಗಂಟೆ 9.30 ರಿಂದ 12 ರವರೆಗೆ ವಿದ್ಯಾರಂಭ (ಅಕ್ಷರಾಭ್ಯಾಸ) ಶಾರದಾ ಸಹಸ್ರ ನಾಮಾರ್ಚನೆ, ಅಷ್ಟೋತ್ತರನಾಮಾರ್ಚನೆ, ಆಯುಧ ಪೂಜೆ, ಇತ್ಯಾದಿ ಸೇವೆಗಳು ನಡೆಯಲಿದೆ.
ಗಂಟೆ 10.00 ರಿಂದ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ ಕೋಟೆಮುಂಡುಗಾರು ಇವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ ಗಂಟೆ 12.00 ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ ಗಂಟೆ 5.00 ರಿಂದ 6.00 ರ ತನಕ ಸ್ನೇಹಾಂಜಲಿ ಕುಣಿತ ಭಜನಾ ತಂಡ ಬೆಳ್ಳಾರೆ ಇವರಿಂದ ಕುಣಿತ ಭಜನೆ ನಡೆಯಲಿದೆ.
ಸಂಜೆ ಗಂಟೆ 6.30 ರಿಂದ
ಜರ್ನಿ ಥೇಟರ್ ಗ್ರೂಪ್ ಮಂಗಳೂರು ಇವರಿಂದ ಜನಪದ ಗೀತೆ ಹಾಗೂ ರಂಗ ಸಂಗೀತ ನಡೆಯಲಿದೆ.
ರಾತ್ರಿ ಗಂಟೆ 8.30 ಕ್ಕೆ ಮಹಾಪೂಜೆ,ಪ್ರಸಾದ ವಿತರಣೆ ನಡೆದ ಬಳಿಕ ಶ್ರೀ ಶಾರದಾ ದೇವಿಯ ವೈಭವದ ಶೋಭಾಯಾತ್ರೆ ನಡೆದು ಜಲಸ್ತಂಭನ ನಡೆಯಲಿದೆ ಎಂದು ಶಾರದೋತ್ಸವ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು ತಿಳಿಸಿದ್ದಾರೆ.