ಅ.15-24: ಕಾಯರ್ತೋಡಿ ಶ್ರೀ ವರದಾಯಿನಿ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನದಲ್ಲಿ 20ನೇ ವರ್ಷದ ನವರಾತ್ರಿ ಉತ್ಸವ

0

ಸುಳ್ಯದ ಕಾಯರ್ತೋಡಿ ಶ್ರೀ ವರದಾಯಿನಿ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನದಲ್ಲಿ 20ನೇ ವರ್ಷದ ನವರಾತ್ರಿ ಉತ್ಸವವು ಅ.15ರಿಂದ ಅ.24ರವರೆಗೆ ಜರುಗಲಿದೆ.

ಅ.15ರಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ಮಹಿಳಾ ಭಜನಾ ಮಂಡಳಿಯ ವತಿಯಿಂದ ಭಜನಾ ಕಾರ್ಯಕ್ರಮ ನೆರವೇರಿತು.
ಅ.16ರಂದು ಅರಂಬೂರಿನ ಶ್ರೀ ಮೂಕಾಂಬಿಕಾ ಭಜನಾ ಮಂಡಳಿ, ಅ.17ರಂದು ಬೆಟ್ಟಂಪಾಡಿ ಶ್ರೀ ಮಂಜುನಾಥೇಶ್ವರ ಭಜನಾ ಮಂಡಳಿ, ಅ.18ರಂದು ಶಾಂತಿನಗರ ದೀಪಾಂಜಲಿ ಭಜನಾ ಮಂಡಳಿ, ಅ.19ರಂದು ಸುಳ್ಯದ ಶ್ರೀ ಗಣಪತಿ ಭಜನಾ ಮಂಡಳಿ, ಅ.20ರಂದು ಸುಳ್ಯದ ವಿವೇಕ ಜಾಗೃತ ಬಳಗ, ಅ.21ರಂದು ಶಾಂತಿನಗರದ ಶ್ರೀ ಮಾತಾ ಭಜನಾ ಮಂಡಳಿ, ಅ.22ರಂದು ಸೂರ್ತಿಲ ರಕ್ತೇಶ್ವರಿ ಭಜನಾ ಮಂಡಳಿ ಅ.23ರಂದು ಅಮೈಮಡಿಯಾರು ಶ್ರೀ ಉಳ್ಳಾಕುಳು ಭಜನಾ ಮಂಡಳಿ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಅ.23ರಂದು ಮಧ್ಯಾಹ್ನ ಮಹಾಪೂಜೆಯ ನಂತರ ವಾಹನಪೂಜೆ ನಡೆಯಲಿದೆ. ಅ.24ರಂದು ಬೆಳಿಗ್ಗೆ ವಿಜಯದಶಮಿ ಮಹಾಪೂಜೆ, ಭಜನಾ ಕಾರ್ಯಕ್ರಮ, ಪ್ರಸಾದ ವಿತರಣೆ, ಮತ್ತು ಶ್ರೀ ಚಾಮುಂಡೇಶ್ವರಿ ದೇವಿಯ ನವಾನ್ನ ಸಂತರ್ಪಣೆ, ಶ್ರೀ ದೇವಿಯ ಸೀರೆಗಳ ಹರಾಜು ನಡೆಯಲಿದ್ದು, ಶ್ರೀ ಚೆನ್ನಕೇಶವ ಭಜನಾ ತಂಡ, ಕನಕಮಜಲಿನ ಸ್ವರ್ಣಾಂಜಲಿ ಮಹಿಳಾ ಭಜನಾ ತಂಡ ಹಾಗೂ ಸುಳ್ಯದ ಸಾಹಿತ್ಯ ಸಂಗೀತ ಕಲಾಕೇಂದ್ರದ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.