ಅ. 24ರ ತನಕ ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

0


ಬಳ್ಪ ಶ್ರೀ ತ್ರಿಶೂಲಿನೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ನವರಾತ್ರಿ ಉತ್ಸವಗಳು ಅ. 15ರಿಂದ ಅ. 24ರ ತನಕ ಶ್ರೀ ಕ್ಷೇತ್ರದ ತಂತ್ರಿಗಳಾದ ಪಾವಂಜೆ ವಾಗೀಶ ಶಾಸ್ತ್ರೀಯವರ ನೇತೃತ್ವದಲ್ಲಿ ನಡೆಯಲಿದೆ. ಅ. 15ರಿಂದ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಿತು.

ಅ. 18ರಂದು ಕದಿರು ತುಂಬಿಸುವುದು, ನವಾನ್ನ ಅ. 19ರಂದು ಸಾಮೂಹಿಕ ಚಂಡಿಕಾಹೋಮ ಜರಗಲಿದೆ. ಅ. 20ರಂದು ಶ್ರೀ ಶಾರದಾ ಪೂಜೆ ಆರಂಭ, ಅ. 23 ಮಹಾನವಮಿ, ಆಯುಧ ಪೂಜೆ ನಡೆಯಲಿದೆ. ಅ. 24ರಂದು ವಿಜಯದಶಮಿ, ಮಹಾಗಣಪತಿಗೆ ಅಪ್ಪ ಸೇವೆ, ನಾಗದೇವರು, ದೈವಗಳಿಗೆ ತಂಬಿಲ, ಹೂವಿನ ಪೂಜೆ, ಮಧ್ಯಾಹ್ನ 11.00 ರಿಂದ ಅಕ್ಷರಾಭ್ಯಾಸ, ಮಹಾಪೂಜೆ, ರಾತ್ರಿ 8.30ಕ್ಕೆ ಸಾಮೂಹಿಕ ರಂಗಪೂಜೆ, ದೈವಗಳಿಗೆ ತಂಬಿಲ ನಡೆಯಲಿದೆ.