ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆಯಿಂದ ಅ. 12ರಿಂದ ಅ. 16ರ ತನಕ ಶೈಕ್ಷಣಿಕ ಅಧ್ಯಯನ ಪ್ರವಾಸ ಕೈಗೊಳ್ಳಲಾಯಿತು.
ಪ್ರವಾಸದಲ್ಲಿ 42 ವಿದ್ಯಾರ್ಥಿಗಳು ಮತ್ತು 7 ಮಂದಿ ಶಿಕ್ಷಕರು ಪಾಳ್ಗೊಡಿದ್ದರು. ರೈಲು ಪ್ರಯಾಣದ ಮೂಲಕ ಮುಂಬೈಗೆ ತೆರಳಿ, ಮುಂಬಯಿ ಮಹಾನಗರದ ಪ್ರೇಕ್ಷಣೀಯ ಸ್ಥಳಗಳಾದ
ನೆಹರೂ ವಿಜ್ಞಾನ ಕೇಂದ್ರ,
ಎಲಿಫೆಂಟಾ ಕೇವ್ಸ್, ಹ್ಯಾಂಗಿಂಗ್ ಗಾರ್ಡನ್, ಗೇಟ್ ವೇ ಆಫ್ ಇಂಡಿಯಾ, ಛತ್ರಪತಿ ಶಿವಾಜಿ ಮಹಾರಾಜ್ ವಸ್ತು ಸಂಗ್ರಹಾಲಯ, ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕ್, ಮೆರೈನ್ ಡ್ರೈವ್, ನಾರಿಮನ್ ಪಾಯಿಂಟ್, ಜುಹೂಬೀಜ್, ಮಹಾಲಕ್ಷ್ಮಿ ದೇವಸ್ಥಾನ, ವರ್ಲಿ ಮತ್ತು ಬಾಂದ್ರ ಸಂಪರ್ಕಿಸುವ ವರ್ಲಿ ಸೀ ಲಿಂಕ್ ಸೇತುವೆ, ಬ್ಯಾಂಡ್ ಸ್ಟ್ಯಾಂಡ್ ಬೀಚ್, ಗಿರಿಗಾನ್ ಚೌಪಟ್ಟಿ ಮೊದಲಾದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿ ವೀಕ್ಷಿಸಲಾಯಿತು.