ಮಡಪ್ಪಾಡಿ ಗ್ರಾಮದ ಮಲೆ ದಿ| ಮೋಂಟಣ್ಣ ಎಂಬವರ ಪತ್ನಿ ಶ್ರೀಮತಿ ದೇವಕಿ ಎಂಬವರು ಇಂದು ಬೆಳಿಗ್ಗೆ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ 80 ವರ್ಷ ಪ್ರಾಯವಾಗಿತ್ತು. ಮೃತರು ಪುತ್ರ ಹೊನ್ನಪ್ಪ ಮಲೆ, ಮಡಪ್ಪಾಡಿ ಸೊಸೈಟಿ ನಿರ್ದೇಶಕ ಪೇರಪ್ಪ ಮಲೆ, ನಾರಾಯಣ, ರಮೇಶ, ಸೊಸೆಯಂದಿರಾದ ಮಡಪ್ಪಾಡಿ ಗ್ರಾ.ಪಂ.ಉಪಾಧ್ಯಕ್ಷೆ ಸುಜಾತ ಹಾಡಿಕಲ್ಲು, ಮಡಪ್ಪಾಡಿ ಗ್ರಾ.ಪಂ. ಮಾಜಿ ಸದಸ್ಯೆ ಸುಮಾತಿ ಸೇರಿದಂತೆ ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.