ಕೇರ್ಪಡದ ಕೆರೆಯಲ್ಲಿ ಮಹಿಳೆಯ ಶವ ಪತ್ತೆ

0

ಎಡಮಂಗಲ ಗ್ರಾಮದ ಕೇರ್ಪಡದ ಸುಂದರ ಗೌಡರ ತೋಟದಲ್ಲಿರುವ ಕೆರೆಯೊಂದರಲ್ಲಿ ಮಹಿಳೆಯ ಮೃತದೇಹವೊಂದು ಇಂದು ಪತ್ತೆಯಾಗಿದೆ.

ಮನೆಯವರು ಅಡಿಕೆ ಹೆಕ್ಕಲು ತೋಟಕ್ಕೆ ಹೋದಾಗ ಶವ ತೇಲುತ್ತಿರುವುದು ಕಂಡು ಬಂತು. ಹಿಂದಿನ ದಿನವೇ ಕೆರೆಗೆ ಮಹಿಳೆ ಬಿದ್ದಿರಬಹುದೆಂದು ಶಂಕಿಸಲಾಗಿದೆ.

ಸ್ಥಳದಲ್ಲಿ ಊರವರು ಸೇರಿದ್ದು, ಪೊಲೀಸರಿಗೆ ವಿಷಯ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.