ಸುಬ್ರಹ್ಮಣ್ಯ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ‌ ದೌರ್ಜನ್ಯ

0

ಪೋಕ್ಸೋ ಪ್ರಕರಣ, ಯುವಕನ ಬಂಧನ

ಕುಕ್ಕೆ ಸುಬ್ರಹ್ಮಣ್ಯದ ವಸತಿ ಗೃಹ ವೊಂದರ ಉದ್ಯೋಗಿ ಆದರ್ಶ ಎಂಬಾತ ಸುಬ್ರಹ್ಮಣ್ಯದ ಅಪ್ರಾಪ್ತ ಬಾಲಕಿಯನ್ನು ಮಡಿಕೇರಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ.

ಸುಬ್ರಹ್ಮಣ್ಯ ಠಾಣೆಯಲ್ಲಿ ಬಾಲಕಿ ಕಾಣೆ ದೂರು ದಾಖಲಾದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಈ ಕೃತ್ಯದ ಮಾಹಿತಿ ಪಡೆದಿದ್ದು ನಡೆಸಿರುವುದಾಗಿ ಪತ್ತೆ ಹಚ್ಚಿದ್ದು ಆದರ್ಶನನ್ನು ಬಂಧಿಸಿದ್ದಾರೆ.