ಗೌರವಾಧ್ಯಕ್ಷ- ಕೃಷ್ಣ ಕಾಮತ್ , ಅಧ್ಯಕ್ಷ -ಶ್ರೀಪತಿ ಭಟ್ ಮಜಿಗುಂಡಿ, ಕಾರ್ಯಾಧ್ಯಕ್ಷ -ಕೆ.ಎಸ್. ಕೃಷ್ಣಪ್ಪ ಕೆದಂಬಾಡಿ, ಪ್ರ.ಕಾರ್ಯದರ್ಶಿ- ಬಂಗಾರು ಭಾರಧ್ವಾಜ್, ಖಜಾಂಜಿ- ನಾರಾಯಣ ನಾಯ್ಕ್ ಅರಂಬೂರು
ಅರಂಬೂರು ಶ್ರೀ ಮೂಕಾಂಬಿಕಾ ಭಜನಾ ಮಂದಿರಕ್ಕೆ 2024 ರ ಹೊಸ್ತಿಲಿನಲ್ಲಿ 50 ವರ್ಷ ಪೂರೈಸುವ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ಆಚರಿಸುವ ಸಲುವಾಗಿ ಪೂರ್ವ ಭಾವಿ ಸಭೆಯು ಅ.19 ರಂದು ಭಜನಾ ಮಂದಿರದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಭಜನಾ ಮಂದಿರದ ಅಧ್ಯಕ್ಷ ರತ್ನಾಕರ ರೈ ಯವರು ವಹಿಸಿದ್ದರು. ವೇದಿಕೆಯಲ್ಲಿ ಗೌರವಾಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ, ನಿವೃತ್ತ ಶಿಕ್ಷಕ ದಿವಾಕರ ನಾಯಕ್ ಉಪಸ್ಥಿತರಿದ್ದರು.
ಮುಂದಿನ
2024 ರ ಫೆಬ್ರವರಿ ತಿಂಗಳಿನಲ್ಲಿ ಮೂರು ದಿನಗಳ ಕಾಲ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು. ಚಂಡಿಕಾ ಹೋಮ, ಏಕಾಹ ಭಜನೆ ಹಾಗೂ ಅಭಿನಂದನಾ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ವನ್ನು ಆಯೋಜಿಸಲಾಗುವುದಾಗಿ ಒಮ್ಮತದ ಅಭಿಪ್ರಾಯ ವ್ಯಕ್ತವಾಯಿತು. ಮಹೋತ್ಸವದ ಸವಿ ನೆನಪಿಗಾಗಿ ಸ್ಮರಣ ಸಂಚಿಕೆಯನ್ನು ಹೊರ ತರುವ ಬಗ್ಗೆ ನಿರ್ಧರಿಸಲಾಯಿತು.
ಸುವರ್ಣ ಮಹೋತ್ಸವ ಸಮಿತಿಗೆಗೌರವಾಧ್ಯಕ್ಷರಾಗಿ ಕೃಷ್ಣ ಕಾಮತ್ ಅರಂಬೂರು, ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ, ಕಾರ್ಯಾಧ್ಯಕ್ಷ ಕೆ.ಎಸ್. ಕೃಷ್ಣಪ್ಪ ಗೌಡ ಕೆದಂಬಾಡಿ, ಪ್ರಧಾನ ಕಾರ್ಯದರ್ಶಿ ಬಂಗಾರು ಭಾರಧ್ವಾಜ್, ಜತೆ ಕಾರ್ಯದರ್ಶಿ ಪುಷ್ಪರಾಜ್ ಅರಂಬೂರು, ಕೋಶಾಧಿಕಾರಿ ನಾರಾಯಣ ನಾಯ್ಕ್ ಅರಂಬೂರು, ಉಪಾಧ್ಯಕ್ಷ ರಾಗಿ ಎ.ಸಿ ವಸಂತ ಗೌಡ, ಪುಷ್ಪಾವತಿ ಕುಡೆಕಲ್ಲು, ಪದ್ಮಯ್ಯ ಗೌಡ ಪಡ್ಪು ರವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಹೋತ್ಸವದ ಉಪ ಸಮಿತಿಗೆ ಸಂಚಾಲಕರು ಮತ್ತು ಸದಸ್ಯರನ್ನು ನೇಮಕ ಮಾಡಲಾಯಿತು.
ಮಂದಿರದ ಗೌರವಾಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ ಪ್ರಾಸ್ತಾವಿಕ ಮಾತನಾಡಿದರು.
ಜತೆ ಕಾರ್ಯದರ್ಶಿ ಪುಷ್ಪರಾಜ್ ಅರಂಬೂರು ಪ್ರಾರ್ಥಿಸಿದರು. ಮಂದಿರದ ಕಾರ್ಯದರ್ಶಿ ಪ್ರೀತಿಕ್ ಕುಲಾಲ್ ಸ್ವಾಗತಿಸಿದರು. ನಿರ್ದೇಶಕ ದೇವಿಪ್ರಸಾದ್ ಆಳ್ವ ಅರಂಬೂರು ವಂದಿಸಿದರು.
ಪ್ರೀತಿಕ್ ಕುಲಾಲ್
ಮತ್ತು ದೇವಿಪ್ರಸಾದ್ ಅರಂಬೂರು ಕಾರ್ಯಕ್ರಮ ನಿರೂಪಿಸಿದರು.