ನೆಹರು ಮೆಮೋರಿಯಲ್ ಕಾಲೇಜು: ಒಂದು ದಿನದ ಕಾರ್ಯಾಗಾರ

0

ನೆಹರು ಮೆಮೋರಿಯಲ್ ಕಾಲೇಜಿನ ವಾಣಿಜ್ಯವಿಭಾಗ, ಕಾಮರ್ಸ್ ಅಸೋಸಿಯೇಶನ್ ಮತ್ತುಆಂತರಿಕ ಗುಣಮಟ್ಟ ಖಾತರಿ ಕೋಶ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಕಾಮರ್ಸ್ ಉಪನ್ಯಾಸಕರ ಸಂಘ ಇದರ ಜಂಟಿ ಆಶ್ರಯದಲ್ಲಿ ಇನ್ವೆಸ್ಟರ್ಸ್ ಅವೇರ್ನೆಸ್ ಎಂಬ ವಿಷಯದ ಬಗ್ಗೆ ಕಾಲೇಜಿನ ಆಡಿಟೋರಿಯಂನಲ್ಲಿ ಒಂದು ದಿನದ ಕಾರ್ಯಾಗಾರವು ನಡೆಯಿತು. ಕಾರ್ಯಾಗಾರವನ್ನು ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಪ್ರೊ.ಬಾಲಚಂದ್ರ ಎಂ. ಉದ್ಘಾಟಿಸಿದರು.


ಕಾರ್ಯಾಗಾರದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರುದ್ರಕುಮಾರ್ ಎಂ.ಎಂ. ವಹಿಸಿದ್ದರು. ಕಾರ್ಯಾಗಾರದಲ್ಲಿ ವಾಣಿಜ್ಯ ಸಂಘದ ಸಂಚಾಲಕಿಯಾದ ಶ್ರೀಮತಿ ದಿವ್ಯಟಿ.ಎಸ್. ಸ್ವಾಗತಿಸಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಹಾಗೂ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಯಾದ ಶ್ರೀಮತಿ ರತ್ನಾವತಿ ಡಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಭಾಗದ ಉಪನ್ಯಾಸಕರಾದ ಶ್ರೀಧರ ವಿ. ವಂದಿಸಿ, ವಿದ್ಯಾರ್ಥಿನಿ ಅಂಕಿತ ಕಾರ್ಯಕ್ರಮ ನಿರೂಪಿಸಿದರು.
ದ್ವಿತೀಯ ಪದವಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಈ ಕಾರ್ಯಾಗಾರವು ಮೂರು ಹಂತಗಳಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಲಿಯೋಅಮಲ್, ಸೀನಿಯರ್ ಬ್ರಾಂಚ್ ಮ್ಯಾನೇಜರ್, ಫ್ರಾಂಕ್ಲಿನ್ ಟೆಂಪೆಲ್ಟೆನ್ ಇಂಡಿಯಾ, ಪ್ರೈ,ಲಿಮಿಟೆಡ್. ನವೀನ್ ರೆಗೋ, ಸೆಬಿರಿಜಿಸ್ಟರ್ಡ್ ಸಿಎಫ್ಪಿ, ಎಲ್ಸ್ಟನ್ ನೀಲ್ ಮೆನೇಜಸ್ ವಿವಿಧ ಅವಧಿಗಳಲ್ಲಿ ಉಪಸ್ಯಾಸ ನೀಡಿದರು. ಕಾಲೇಜಿನ ಉಪನ್ಯಾಸಕರ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಸಹಕಾರದೊಂದಿಗೆ ಕಾರ್ಯಾಗಾರವು ಯಶಸ್ವಿಯಾಗಿ ನಡೆಯಿತು.