ಕಮಿಲಡ್ಕ ದುರ್ಗಾದೇವಿ ಮಂದಿರದಲ್ಲಿ ಹರಕೆಯ ತುಲಾ ಭಾರ ಸೇವೆ ಸಲ್ಲಿಸಿದ ಮುಸ್ಲಿಂ ಮಹಿಳೆ

0

ಕಮಿಲಡ್ಕ ದುರ್ಗಾದೇವಿ ಮಂದಿರ ಮತ್ತು ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ನಡೆದ ನವರಾತ್ರಿ ಉತ್ಸವದ ಸಮಯದಲ್ಲಿ ವಿಶೇಷವಾಗಿ ದೇವಿಯ ಹಾಗೂ ದೈವದ ಪಾತ್ರಿಯವರಿಂದ ದರ್ಶನ ಸೇವೆ ನಡೆದು ನೂರಾರು ಮಂದಿ ಭಕ್ತರು ಹರಕೆಯ ತುಲಾ ಭಾರ ಸೇವೆಯನ್ನು ಸಮರ್ಪಿಸಿದರು.


ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ಮುಸ್ಲಿಂ ಧರ್ಮದ ಮಹಿಳೆಯೋರ್ವರು ಸಂಕಲ್ಪ ಮಾಡಿಕೊಂಡ ಸಲುವಾಗಿ ಹರಕೆಯ ತುಲಾ ಭಾರ ಸೇವೆಯನ್ನು ಸಮರ್ಪಿಸಿ ಪಾತ್ರಿಯವರಿಂದ ಪ್ರಸಾದ ಸ್ವೀಕರಿಸಿದರು.