ಕಮಿಲಡ್ಕ ದುರ್ಗಾದೇವಿ ಮಂದಿರ,ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಹಾನವರಾತ್ರಿ ಉತ್ಸವ

0

ದೇವಿಯ ಹಾಗೂ ದೈವದ ದರ್ಶನ ಸೇವೆ – ಭಕ್ತರಿಂದ ಹರಕೆಯ ತುಲಾಭಾರ ಸೇವೆ

ಉಬರಡ್ಕ ಮಿತ್ತೂರು ಗ್ರಾಮದ ಉದಯಗಿರಿ ಕಮಿಲಡ್ಕ ಶ್ರೀ ದುರ್ಗಾದೇವಿ ಮಂದಿರ ಶ್ರೀ ಮಹಾ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಅ. 22 ರಂದು ಮಹಾನವರಾತ್ರಿ ಉತ್ಸವವು ಅತ್ಯಂತ ಭಕ್ತಿ ಸಂಭ್ರಮದಿಂದ ಜರುಗಿತು.

ಕ್ಷೇತ್ರದಲ್ಲಿ ಅ.15 ರಂದು ಪ್ರಾತ: ಕಾಲ ದೇವಿಯ ಗದ್ದಿಗೇರಿದ ನಂತರ
ಅ.16 ರಂದು ಕದಿರು ಕಟ್ಟುವ ಕಾರ್ಯಕ್ರಮವಾಗಿ ಹೊಸ ಅಕ್ಕಿ ನವಾನ್ನ ಭೋಜನದ ಕಾರ್ಯಕ್ರಮವು ನಡೆಯಿತು.
ಅ.22 ರಂದು ಬೆಳಗ್ಗೆ ಝೀ ಕನ್ನಡ ಖ್ಯಾತಿಯ ಗಾಯಕ ಚೆನ್ನಪ್ಪ ಬಾಗಲಕೋಟೆ ಬಳಗದಿಂದ ಭಜನಾ ಕಾರ್ಯಕ್ರಮವು ನಡೆಯಿತು.
ಬಳಿಕ ಶ್ರೀ ಮಹಾವಿಷ್ಣು ಮೂರ್ತಿ ದೈವದ ದರ್ಶನ ಪಾತ್ರಿ ರಾಮ ಮಣಿಯಾಣಿ ಆಲೆಟ್ಟಿ ಯವರಿಂದ ದೈವದ ದರ್ಶನ ಸೇವೆಯಾಗಿ ಮಾರಿಕಳ ಪ್ರವೇಶವಾದ ಬಳಿಕ ಭಕ್ತರಿಗೆ ಅಭಯದ ನುಡಿ ನೀಡಿ ಹರಸಲಾಯಿತು. ಶ್ರೀ ದೇವಿಯ ದರ್ಶನ ಪಾತ್ರಿ ರವಿಪ್ರಸಾದ್ ಕಮಿಲಡ್ಕ ರವರಿಂದ ದೇವಿಯ ದರ್ಶನ ಸೇವೆಯಾಗಿ ಭಕ್ತರಿಂದ ಹರಕೆಯ ತುಲಾಭಾರ ಸೇವೆಯು ನಡೆಯಿತು. ಆಗಮಿಸಿದ ಭಕ್ತರಿಗೆ ಪ್ರಸಾದ ವಿತರಣೆಯಾಗಿ ವಿಶೇಷವಾಗಿ ಪ್ರೇತಾ ಉಚ್ಚಾಟನೆ ಹಾಗೂ ಭಕ್ತರಿಂದ ಹರಕೆ ಒಪ್ಪಿಸುವ ಕಾರ್ಯಕ್ರಮವು ನಡೆಯಿತು. ಮಧ್ಯಾಹ್ನ ಮಹಾ ಪೂಜೆಯಾಗಿ ಆಗಮಿಸಿದ ಸರ್ವರಿಗೂ ಪ್ರಸಾದ ವಿತರಣೆಯಾಯಿತು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆಯು ನಡೆಯಿತು.


ಸಾಯಂಕಾಲ ದೇವಿಯ ದರ್ಶನ ಪಾತ್ರಿಯವರ ಮಂಗಳ ಸ್ನಾನದೊಂದಿಗೆ ಉತ್ಸವವು ಸಮಾಪನಗೊಂಡಿತು. ಕ್ಷೇತ್ರದಲ್ಲಿ ವಿಶೇಷವಾಗಿ ಸಾರ್ವಜನಿಕ ಆಯುಧ ಪೂಜೆಯು ನಡೆಯಿತು.


ಈ ಸಂದರ್ಭದಲ್ಲಿ ಕಮಿಲಡ್ಕ ವಿಶ್ವನಾಥ ಪೂಜಾರಿ, ಗುಳಿಗ ದೈವದ ಪೂಜಾರಿ ಶಶಿಧರ ಕಮಿಲಡ್ಕ, ಕುಟುಂಬಸ್ಥರು, ಬಂಧು ವರ್ಗದವರು ಸಹಕರಿಸಿದರು. ಊರ ಪರವೂರ ಭಕ್ತಾದಿಗಳು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದರು.