ಮರ್ಕಂಜ : ಕ್ರಿಕೆಟ್ ಪಂದ್ಯಾಟ ಹಾಗೂ ಸಾಧಕರಿಗೆ ಸನ್ಮಾನ

0

ಮರ್ಕoಜದ ಜೈ ಬಲ್ನಾಡ್ ಕ್ರಿಕೆಟರ್ಸ್ ವತಿಯಿಂದ ಕ್ರಿಕೆಟ್ ಪಂದ್ಯಾಟ ಹಾಗೂ ಗ್ರಾಮದ ಲೆಜೆಂಡ್ ಕ್ರಿಕೆಟ್ ಆಟಗಾರರಿಗೆ ಸನ್ಮಾನ ಕಾರ್ಯಕ್ರಮ ಅಕ್ಟೋಬರ್ 22ರಂದು ತೇರ್ಥಮಜಲು ಶಾಲಾ ಮೈದಾನದಲ್ಲಿ ನಡೆಯಿತು.


ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟವನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಆನಂದ ಬಾನೂರು ಉದ್ಘಾಟಿಸಿದರು. 2 ದಿನ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಮರ್ಕಂಜದ ಯಂಗ್ ಫ್ರೆಂಡ್ಸ್ ಬೂಡು ಪ್ರಥಮ ಸ್ಥಾನವನ್ನು ಪಡೆಯಿತು. ಎಲಿಮಲೆ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತ್ತು.


ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮರ್ಕಂಜದ ಪಂಚಸ್ಥಾಪನೆಗಳ ಆಡಳಿತ ಮಂಡಳಿಯ ಮಾಜಿ ಅಧ್ಯಕ್ಷ ಯುವರಾಜ ಜೈನ್ ಬಲ್ನಾಡ್ ಪೇಟೆ ವಹಿಸಿದ್ದರು. ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಮರ್ಕಂಜದ ಅನ್ನಪೂರ್ಣೇಶ್ವರಿ ಯೋಗೀಶ್ವರ ಸಿದ್ದ ಮಠದ ರಾಜೇಶ್ ನಾಥ ಜಿ , ಮರ್ಕಂಜ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಗೋವಿಂದ ಅಳವುಪಾರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.


ಮರ್ಕಂಜ ಗ್ರಾಮದ ಕ್ರಿಕೆಟ್ ಇತಿಹಾಸದಲ್ಲಿ ಎರಡು ದಶಕಗಳಿಂದ ಲೆಜೇಂಡ್ರಿ ಆಟಗಾರರಾಗಿ ಗುರುತಿಸಿಕೊಂಡಿದ್ದ ದಿನೇಶ್ ಬೊಮ್ಮಾರು, ಯತೀಶ್ ಬೊಮ್ಮಾರು, ಮನೋಹರ ರೈ, ದೇವಪ್ಪ ಹೈದಂಗೂರು, ವಾಸುದೇವ ಗುಂಡಿ, ಬಾಲಕೃಷ್ಣ ಕಂಜಿಪಿಲಿ, ಬಾಲಚಂದ್ರ ಗುಂಪು ಇವರನ್ನು ಜೈ ಬಲ್ನಾಡ್ ತಂಡದ ವತಿಯಿಂದ ಗೌರವಿಸಲಾಯಿತು. ಪ್ರದೀಪ್ ಜೈನ್ ಬನಾರುಪೇಟೆ ಅಭಿನಂದನಾ ಮಾತುಗಳ ನಾಡಿದು. ರಮೇಶ್ ಬಳ್ಳಾರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಬಾಲಚಂದ್ರ ಗುರೂಂಪು ಹೊಂದಿಸಿದರು. ನಯನ್ ಕುಮಾರ್ ಬಲ್ನಾಡು ಪೇಟೆ ಪಂದ್ಯಾಟದ ನೇತೃತ್ವವನ್ನು ವಹಿಸಿದ್ದು ಕೀರ್ತನ್ ಭರತೇಶ ಹಾಗೂ ತಂಡದ ಸದಸ್ಯರು ಹಾಗೂ ಎಂಪಿಎಲ್ ತಂಡದ ಪದಾಧಿಕಾರಿಗಳು ಕ್ರಿಕೆಟ್ ಪಂದ್ಯಾಟದಲ್ಲಿ ಸಹಕರಿಸಿದರು.