ಪಂಜದಲ್ಲಿ ಭಕ್ತಿ ಸಂಭ್ರಮದ ನಾಡಹಬ್ಬ -ಶ್ರೀ ಶಾರದೋತ್ಸವ

0

ಮನೆಗಳು ಸಂಸ್ಕಾರಯುತ ಶಕ್ತಿಕೇಂದ್ರ ಆಗ ಬೇಕು -ಪ್ರಕಾಶ್ ಮೂಡಿತ್ತಾಯ

ಧಾರ್ಮಿಕ ನಂಬಿಕೆಗಳನ್ನು ಮೈಗೂಡಿಸಿಕೊಳ್ಳಬೇಕು-
ಕು.ಭಾಗೀರಥಿ ಮುರುಳ್ಯ

ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ , ಶ್ರೀ ಶಾರದೋತ್ಸವ ಸಮಿತಿ- 2023 ಇದರ ಆಶ್ರಯದಲ್ಲಿ 14ನೇ ವರ್ಷದ ಪಂಜ ಪರಿಸರದ ನಾಡ ಹಬ್ಬ ಶ್ರೀ ಶಾರದೋತ್ಸವ -2023 ಅ.23.ರಂದು ವಿವಿಧ ವೈಧಿಕ,ಧಾರ್ಮಿಕ,ಸಾಂಸ್ಕೃತಿಕ, ಕ್ರೀಡಾ ಕಾರ್ಯಕ್ರಮಗಳೊಂದಿಗೆ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ
ದಲ್ಲಿ ಭಕ್ತಿ ಸಂಭ್ರಮದೊಂದಿಗೆ ವಿಜೃಂಭಣೆಯಿಂದ ನಡೆಯಿತು.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ
ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಕುಸುಮಾಧರ ಕೆಮ್ಮೂರು ಸಭಾಧ್ಯಕ್ಷತೆ ವಹಿಸಿದ್ದರು.
ಸುಳ್ಯ ಸ.ಪ.ಪೂ.ಕಾಲೇಜು(ಪ್ರೌಢಶಾಲಾ ವಿಭಾಗ) ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ ಧಾರ್ಮಿಕ ಉಪನ್ಯಾಸ ನೀಡಿ.”ತಂದೆ ತಾಯಿ ಕಣ್ಣಿಗೆ ಕಾಣುವ ದೇವರು. ಧಾರ್ಮಿಕ ಆಚರಣೆಗಳು ಮತ್ತು ಭಜನೆ ಪ್ರತಿ ಮನೆಗಳಲ್ಲೂ ಅಳವಡಿಸಿ ಕೊಳ್ಳ ಬೇಕು.ಈ ಮೂಲಕ ಪ್ರತಿ ಮನೆಗಳು
ಶಕ್ತಿ ಕೇಂದ್ರಗಳು ಆಗ ಬೇಕು.” ಎಂದು ಅವರು ಹೇಳಿದರು.

ಮುಖ್ಯ ಅತಿಥಿ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ “ನಮ್ಮ ಹಿಂದಿನವರು ಆಚರಿಸಿ ಕೊಂಡು ಬಂದಿರುವ ಧಾರ್ಮಿಕ ನಂಬಿಕೆಗಳನ್ನು ಉಳಿಸಿ ಬೆಳೆಸ ಬೇಕು. ಅದಕ್ಕಾಗಿ ಇಂತಹ ಸಂಘಟನೆಗಳಲ್ಲಿ ಬೆರೆತು ಸೇವೆ ನೀಡುತಾ ಉತ್ತಮ ಜೀವನ ನಡೆಸುವ”.ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮೀ ಜಳಕದಹೊಳೆ, ಸುಳ್ಯ ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಪಿ.ಸಿ ಜಯರಾಮ , ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತುಮೊಟ್ಟೆ, ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು ಪಾಲ್ಗೊಂಡಿದ್ದರು. ನೋಟರಿ ಮತ್ತು ವಕೀಲ ಪುರುಷೋತ್ತಮ ಮಲ್ಕಜೆ ರವರು ಪ್ರತಿಭಾ ಪುರಸ್ಕಾರ ನೆರವೇರಿಸಿದರು.


ಭಜನಾ ಮಂಡಳಿ ಗೌರವಾಧ್ಯಕ್ಷ ಜಾಕೆ ಮಾಧವ ಗೌಡ, ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ,ಕಾರ್ಯದರ್ಶಿ ಗುರುಪ್ರಸಾದ್ ತೋಟ ,ಉತ್ಸವ ಸಮಿತಿ ಕಾರ್ಯದರ್ಶಿ ನಾರಾಯಣ ಶಿರಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಪ್ರತಿಭಾ ಪುರಸ್ಕಾರ:
ಪಂಜ ಕ್ಲಸ್ಟರಿನ 9 ಶಾಲೆಗಳ ಆಯ್ದು 9 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಶ್ರೀ ಶಾರದಾಂಬಾ ಭಜನಾ ಮಂಡಳಿ ವತಿಯಿಂದ ಪ್ರತಿಭಾ ಪುರಸ್ಕಾರ ಜರುಗಿತು. ಪಡ್ಪಿನಂಗಡಿ ಶಾಲೆಯ ಮೇಘಶ್ರೀ ಪಿ, ನಾಗತೀರ್ಥ ಶಾಲೆಯ ಅನ್ವಿತಾ ಸಿ, ಪಂಬೆತ್ತಾಡಿ ಶಾಲೆಯ ಅನೀಶ್ ಕಲ್ಚಾರ್, ಕೂತ್ಕುಂಜ ಶಾಲೆಯ ಜನನೀಶ್ ಎಚ್, ಕರಿಕ್ಕಳ ಶಾಲೆಯ ಲಿಖಿತ್, ಕೋಟೆಗುಡ್ಡೆ ಶಾಲೆಯ ಅಂಕಿತ ಪಿ ಎಲ್ , ಕಲ್ಮಡ್ಕ ಶಾಲೆಯ ಹೇಮಂತ, ಪಾಂಡಿಗದ್ದೆ ಶಾಲೆಯ ದೀಪಿಕಾ ಎನ್, ಪಂಜ ಶಾಲೆಯ ಕಾರ್ತಿಕ್ ಪ್ರತಿಭಾ ಪುರಸ್ಕಾರ ಸ್ವೀಕರಿಸಿದರು.
ಭಜನಾ ಮಂಡಳಿಗೆ ಕೊಡುಗೆಗಳನ್ನು ನೀಡಿದವರನ್ನು ಹಾಗೂ ಅತಿಥಿ-ಗಣ್ಯರನ್ನು, ಶೈಕ್ಷಣಿಕ ಸಾಧಕರನ್ನು ಈ ವೇಳೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ರಕ್ಷಾ ಕೆಮ್ಮೂರು ಪ್ರಾರ್ಥಿಸಿದರು.ಗುರುಪ್ರಸಾದ್ ತೋಟ ಸ್ವಾಗತಿಸಿದರು. ಬಾಲಕೃಷ್ಣ ಪುತ್ಯ ಪ್ರಾಸ್ತಾವಿಕಗೈದರು.ತೀರ್ಥಾನಂದ ಕೊಡೆಂಕಿರಿ ನಿರೂಪಿಸಿದರು. ನಾರಾಯಣ ಶಿರಾಜೆ ವಂದಿಸಿದರು.

: ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನೆ
ಸಾಂಸ್ಕೃತಿಕ ಸ್ಪರ್ಧೆಯನ್ನು ಕೂತ್ಕುಂಜ ಶ್ರೀ ಶಂಕರನಾರಾಯಣ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷೆ ಶ್ರೀಮತಿ ಪ್ರಭಾವತಿ ಹೆಗ್ಡೆ ರವರು ಉದ್ಘಾಟಿಸಿದರು. ಕ್ರೀಡಾ ಸ್ಪರ್ಧೆಯನ್ನು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಪೈ ಉದ್ಘಾಟಿಸಿದರು.
ಸಭಾಧ್ಯಕ್ಷತೆಯನ್ನು ಉತ್ಸವ ಸಮಿತಿ ಅಧ್ಯಕ್ಷ ಕುಸುಮಾಧರ ಕೆಮ್ಮೂರು
ವಹಿಸಿದ್ದರು.ರಾಜ್ಯ ಲಗೋರಿ ಅಸೋಸಿಯೇಷನ್ ಅಧ್ಯಕ್ಷ ದೊಡ್ಡಣ್ಣ ಬರೆಮೇಲು, ಒಡಿಯೂರು ಗ್ರಾಮ ವಿಕಾಸನ ಯೋಜನೆಯ ಮೇಲ್ವಿಚಾರಕಿ ಶ್ರೀಮತಿ ಗೀತಾ, ಕ್ರೀಡಾ ಸಂಚಾಲಕ ಯೋಗೀಶ್ ಚಿದ್ಗಲ್, ಸಾಂಸ್ಕೃತಿಕ ಸ್ಪರ್ಧೆಗಳ ಸಂಚಾಲಕ ಸತೀಶ್ ಪಂಜ, ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಪವನ್ ಪಲ್ಲತ್ತಡ್ಕ, ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ, ಉತ್ಸವ ಸಮಿತಿ ಕಾರ್ಯದರ್ಶಿ ನಾರಾಯಣ ಶಿರಾಜೆ , ಭಜನಾ ಮಂಡಳಿ ಕಾರ್ಯದರ್ಶಿ ಗುರುಪ್ರಸಾದ್ ತೋಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾನಿಕಾ ಪ್ರಾರ್ಥಿಸಿದರು.ಗುರುಪ್ರಸಾದ್ ತೋಟ ಸ್ವಾಗತಿಸಿದರು.ತೀರ್ಥಾನಂದ ಕೊಡೆಂಕಿರಿ ನಿರೂಪಿಸಿದರು. ನಾರಾಯಣ ಶಿರಾಜೆ ವಂದಿಸಿದರು.


ಪೂರ್ವಾಹ್ನ ಪ್ರತಿಷ್ಠೆ ನಡೆದು,ಭಜನಾ ಸಂಕೀರ್ತನೆ , ಮಕ್ಕಳಿಗೆ ಅಕ್ಷರಾಭ್ಯಾಸ , ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ ಜರುಗಿತು.ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ಜರುಗಿತು.

ಸಾಂಸ್ಕೃತಿಕ ಸಂಭ್ರಮ: ರಂಜನಿ ಸಂಗೀತ ಸಭಾ -ಪಂಜ ಶಾಖೆ ಇದರ ವಿದ್ಯಾರ್ಥಿಗಳಿಂದ ಲಘು ಶಾಸ್ತ್ರೀಯ ಸಂಗೀತ ಗಾಯನ. ಡ್ಯಾನ್ಸ್ & ಬೀಟ್ಸ್ ನೃತ್ಯ ಕಲಾ ಕೇಂದ್ರದವರಿಂದ ನೃತ್ಯ ವೈವಿಧ್ಯ. ವಿಶ್ವ ಕಲಾನಿಕೇತನ ಕಲ್ಚರಲ್ ಮತ್ತು ಆರ್ಟ್ಸ್ ಪುತ್ತೂರು ಇದರ ಪಂಜ ಶಾಖೆಯ ವಿದ್ಯಾರ್ಥಿಗಳಿಂದ ಭರತ ನಾಟ್ಯ ಪ್ರದರ್ಶನ ಗೊಂಡಿತ್ತು.

ವೈಭವದ ಶೋಭಾಯಾತ್ರೆ:
ಸಂಜೆ ಶ್ರೀ ಶಾರದಾ ಮಾತೆಯ ವೈಭವದ ಶೋಭಾಯಾತ್ರೆ ನಡೆದು ಪಂಜ ಹೊಳೆಯ ನಾಗತೀರ್ಥ (ಪಲ್ಲೋಡಿ)ಸಂಗಮದಲ್ಲಿ ಜಲಸ್ತಂಭನ ನಡೆಯಿತು. ಶೋಭಾಯಾತ್ರೆಯಲ್ಲಿ ಕುಣಿತ ಭಜನೆ ತಂಡಗಳು, ಭಜನೆ , ಸಿಂಹ ವೇಷ ತಂಡ ವಿಶೇಷ ಆಕರ್ಷಣೆಯಾಗಿತ್ತು.