ಸುಳ್ಯ ರೇಂಜ್ ಮುಅಲ್ಲಿಂ ಮೆಹರ್ ಜಾನ್ಚಾಂಪ್ಯನ್ ಟ್ರೋಫಿ ಪಡೆದ ಗಾಂಧಿನಗರ ಮದ್ರಸ, ರನ್ನರ್ ಅನ್ಸಾರಿಯಾ ಮದ್ರಸ

0

ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಎಸ್ ಜೆ ಎಂ ರಾಜ್ಯ ಸಮಿತಿಯು ರಾಜ್ಯಾದ್ಯಂತವಿರುವ ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಅಧೀನದ ಮದ್ರಸಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಾವಿರಾರು ಮುಅಲ್ಲಿಮರ ಸಾಹಿತ್ಯ ಅಭಿರುಚಿಗಳ ಅನಾವರಣ ಹಾಗೂ ಪ್ರೋತ್ಸಾಹಕ್ಕಾಗಿ “ಅರಳಿದ ಸಾಹಿತ್ಯ ಬೆಳಗಿದ ಸಮಾಜ” ಎಂಬ ಧ್ಯೇಯದೊಂದಿಗೆ ಮುಅಲ್ಲಿಂ ಮೆಹರ್ ಜಾನ್ – 2023 ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈ ಪ್ರಯುಕ್ತ ಎಸ್ ಜೆ ಎಂ ಸುಳ್ಯ ರೇಂಜ್ ಅಧ್ಯಾಪಕರ ಸ್ಪರ್ಧಾ ಕಾರ್ಯಕ್ರಮಗಳು ಹಯಾತುಲ್ ಇಸ್ಲಾಂ ಮದ್ರಸ ಸಭಾಂಗಣ ಜಾಲ್ಸೂರು ಅಡ್ಕಾರಿನಲ್ಲಿ ಇತ್ತೀಚಗೆ ನಡೆಯಿತು.

ಜಾಲ್ಸೂರು ಜಮಾಅತ್ ಅಧ್ಯಕ್ಷ ಜಿ ಎಂ ಉಸ್ಮಾನ್ ರವರು ಧ್ವಜಾರೋಹಣಗೈದು ಕಾರ್ಯಕ್ರಮಕ್ಕೆ ಚಾಲನೆನೀಡಿದರು.ವಿವಿಧ ಭಾಷೆಗಳ ವೈವಿಧ್ಯ ವಿಷಯಗಳ ಸ್ಪರ್ಧೆಗಳಲ್ಲಿ ಸೀನಿಯರ್ ವಿಭಾಗದ ಅಬ್ದುಲ್ ಖಾದರ್ ಮುಸ್ಲಿಯಾರ್ ಗಾಂಧಿನಗರ,ಅಬ್ದುಲ್ ಲತೀಫ್ ಸಖಾಫಿ ಗಾಂಧಿನಗರ,ಮುಹಮ್ಮದ್ ಹನೀಫ್ ಸಖಾಫಿ ಗಾಂಧಿನಗರ,ಅಬ್ದುರ್ರಹ್ಮಾನ್ ಸಅದಿ ಗಾಂಧಿನಗರ,ಅಬೂಬಕ್ಕರ್ ಸಖಾಫಿ ಗಾಂಧಿನಗರ,ಅಬ್ದುಲ್ ಕರೀಂ ಸಖಾಫಿ ಮೊಗರ್ಪಣೆ,ಎಸ್ ಎಂ ಅಬೂಬಕ್ಕರ್ ಮುಸ್ಲಿಯಾರ್ ಬದಿಯಡ್ಕ,ಮುಹಮ್ಮದಲಿ ಸಖಾಫಿ ಗೂನಡ್ಕ,ಇಸ್ಮಾಯೀಲ್ ಝೈನಿ ಪೆರಾಜೆ,ಹನೀಫ್ ಝೈನಿ ಪೆರಾಜೆ,ಫೈಝಲ್ ಝುಹ್ರಿ ಏಣಾವರ ಹಾಗೂ ಜೂನಿಯರ್ ವಿಭಾಗದ ಇರ್ಫಾನ್ ಸಅದಿ ಗಾಂಧಿನಗರ,ಸಿದ್ದೀಖ್ ಸಅದಿ ಮೊಗರ್ಪಣೆ,ನೌಶಾದ್ ಮದನಿ ಅನ್ಸಾರಿಯಾ,ಸಯ್ಯಿದ್ ಹುಸೈನ್ ಪಾಷಾ ಅನ್ಸಾರಿಯಾ,ಹಂಝತ್ತುಲ್ ಕರ್ರಾರ್ ಮುಈನಿ ಅನ್ಸಾರಿಯಾ,ಅಬ್ದುಲ್ಲ ಹಿಮಮಿ ಅನ್ಸಾರಿಯಾ,ಮುನೀರ್ ಹನೀಫಿ ಜಟ್ಟಿಪ್ಪಳ್ಳ,ಜುನೈದ್ ಹಿಮಮಿ ಜಾಲ್ಸೂರು ಇವರು ಪ್ರಥಮ ಸ್ಥಾನ ಗಳಿಸಿ ಝೋನ್ ಮಟ್ಟದ ಸ್ಪರ್ಧೆಗೆ ಆಯ್ಕೆಯಾದರು.ಅತೀ ಹೆಚ್ಚು ಅಂಕ ಪಡೆದು ಗಾಂಧಿನಗರ ಮದ್ರಸ ಚಾಂಪ್ಯನಾದರೆ ಪ್ರತಿ ಸ್ಪರ್ಧಿ ಅನ್ಸಾರಿಯಾ ಮದ್ರಸ ರನ್ನರಾದರು.ಸೀನಿಯರ್ ವಿಭಾಗದ ಫೈಝಲ್ ಝುಹ್ರಿ ಏಣಾವರ,ಮುಹಮ್ಮದಲಿ ಸಖಾಫಿ ಗೂನಡ್ಕ ಜೂನಿಯರ್ ವಿಭಾಗದ ಹಂಝತ್ತುಲ್ ಕರ್ರಾರ್ ಮುಈನಿ ಅನ್ಸಾರಿಯ ವ್ಯಕ್ತಿಗತ ಚಾಂಪ್ಯನ್ ಟ್ರೋಫಿಗೆ ಅರ್ಹರಾದರು.ರೇಂಜ್ ಅಧ್ಯಕ್ಷರಾದ ಎಸ್ ಎಂ ಅಬೂಬಕ್ಕರ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಗಳನ್ನು ಎಸ್ ಜೆ ಎಂ ರಾಜ್ಯ ಕೋಶಾಧಿಕಾರಿ ಇಬ್ರಾಹಿಂ ಸಖಾಫಿ ಪುಂಡೂರು ಉದ್ಘಾಟಿಸಿದರು.ಎಸ್ ಎಂ ಎ ಸುಳ್ಯ ರೀಜ್ಯನಲ್ ಅಧ್ಯಕ್ಷ ಅಬ್ದುಲ್ ಹಮೀದ್ ಬೀಜಕೊಚ್ಚಿ,ಉಪಾಧ್ಯಕ್ಷ ಅಬ್ದುಲ್ ಹಮೀದ್ ಸುಣ್ಣಮೂಲೆ,ಜಾಲ್ಸೂರು ಜಮಾಅತ್ ಅಧ್ಯಕ್ಷ ಜಿ ಎಂ ಉಸ್ಮಾನ್,ಪ್ರಧಾನ ಕಾರ್ಯದರ್ಶಿ ನಜೀಬ್,ಕೋಶಾಧಿಕಾರಿ ಎನ್ ಐ ಮುಹಮ್ಮದ್ ಕುಂಞ್ಞಿ ,ಕಾರ್ಯದರ್ಶಿ ಅಬ್ದುರ್ರಝಾಖ್,ಸದಸ್ಯರುಗಳಾದ ಇಬ್ರಾಹಿಂ ಹಾಜಿ ಕತ್ತರ್,ರಝಾಖ್ ಹಾಜಿ,ಪಿ ಎಂ ಅಬ್ದುಲ್ಲ,ನೌಫಲ್ ಸಅದಿ,ಸುಣ್ಣಮೂಲೆ ಜಮಾಅತ್ ಅಧ್ಯಕ್ಷ ಅಬ್ದುರ್ರಹ್ಮಾನ್ ಸಅದಿ,ಎಸ್ ವೈ ಎಸ್ ರಾಜ್ಯ ಸಮಿತಿ ಸದಸ್ಯ ಅಬೂಬಕ್ಕರ್ ಸಿದ್ದೀಖ್ ಕಟ್ಟೆಕ್ಕಾರ್ಸ್ ಮುಂತಾದವರು ಅತಿಥಿಗಳಾಗಿ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಿದರು.ಶಾಫಿ ಸಅದಿ, ಅಬ್ದುಲ್ ಕಯ್ಯೂಂ,ಅಶ್ರಫ್,ರಫೀಖ್ ಸಿ ಎ ಸಹಕರಿಸಿದರು.ಪ್ರೋಗ್ರಾಂ ಕಮಿಟಿ ಚಯರ್ಮಾನ್ ಜುನೈದ್ ಹಿಮಮಿ ಸಖಾಫಿ ಜಾಲ್ಸೂರು ಸ್ವಾಗತಿಸಿ,ಸ್ಥಳೀಯ ಸದರ್ ಮುಅಲ್ಲಿಂ ಶಾಹುಲ್ ಹಮೀದ್ ಸಖಾಫಿ ವಂದಿಸಿದರು.ರೇಂಜ್ ಪ್ರಧಾನ ಕಾರ್ಯದರ್ಶಿ ನಿಝಾರ್ ಸಖಾಫಿ ಮುಡೂರು,ಪ್ರೋಗ್ರಾಂ ಕಮಿಟಿ ಕನ್ವೀನರ್ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ ನಿರೂಪಿಸಿದರು.ಜಾಲ್ಸೂರು ಜಮಾಅತ್ ವತಿಯಿಂದ ಉತ್ತಮ ಸತ್ಕಾರ ಮತ್ತು ಸೌಕರ್ಯ ಏರ್ಪಡಿಸಲಾಗಿತ್ತು.