ಮಳೆಯ ನಡುವೆಯೂ
ಡಿಜೆಗೆ ಕುಣಿದು ಕುಪ್ಪಳಿಸಿದ ಯುವಕ, ಯುವತಿಯರ ತಂಡ
ಇಂದು ಸುಳ್ಯದಲ್ಲಿ ಅದ್ದೂರಿಯಾಗಿ ನಡೆದ ಸುಳ್ಯ ದಸರಾ ಶೋಭಾ ಯಾತ್ರೆ ಹಳೆಗೇಟು ಬಳಿ ತಲುಪುತ್ತಿದ್ದಂತೆ ಧಾರಾಕಾರವಾಗಿ ಮಳೆ ಸುರಿಯಲು ಆರಂಭಿಸಿತು.
ಆದರೂ ಮಳೆಯನ್ನು ಲೆಕ್ಕಿಸದೆ ಡಿಜೆ ಅಬ್ಬರಕ್ಕೆ ಯುವಕ ಯುವತಿಯರ ತಂಡ ಕುಣಿದು ಕುಪ್ಪಳಿಸಿದ ದೃಶ್ಯ ಕಂಡು ಬಂದಿತ್ತು.
ಶಾರದಾಂಬೋತ್ಸವದ ಅದ್ದೂರಿ ಶೋಭಾಯಾತ್ರೆ ಮಳೆಯಲ್ಲೂ ಸಂಭ್ರಮದಿಂದ ಸಾಗಿ ಬಂದಿತ್ತು. ಒಮ್ಮಿಂದೊಮ್ಮೆಗೆ ಮಳೆ ಸುರಿದ ಕಾರಣ ಜನರು ಚೆಲ್ಲಾಪಿಲ್ಲಿಯಾದರು.