ಕಾರವಾರದ ಕೈಗಾ
ನ್ಯೂಕ್ಲಿಯರ್ ಪವರ್ ಕಾರ್ಪೋರೇಷನ್ ಆಫ್ ಇಂಡಿಯಾದ ಯೋಜನಾ ನಿರ್ದೇಶಕರಾದ ಬಿ.ಕೆ.ಚೆನ್ನಕೇಶವರವರು ಅ.31ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ಚೆನ್ನಕೇಶವರು1988ರ ಡಿಸೆಂಬರ್ ತಿಂಗಳಲ್ಲಿ ಕೈಗಾ ಅಣು ಸ್ಥಾವರದಲ್ಲಿ ಪ್ರಾಜೆಕ್ಟ್ ಯೂನಿಟ್ 1 ಮತ್ತು 2 ರಲ್ಲಿ ಸರ್ಕಾರಿ ಇಂಜಿನಿಯರ್ ಆಗಿ ನಿಯುಕ್ತಿಕೊಂಡು,ನಂತರ ಅದೇ ಪ್ರಾಜೆಕ್ಟ್ ನಲ್ಲಿ ಹೊಸ ಯೂನಿಟ್ 3 ಮತ್ತು 4 ರ ಕಾಮಗಾರಿಯನ್ನು ಸಂಪೂರ್ಣ ಗೊಳಿಸಿ ಸುಮಾರು 25 ವರ್ಷಗಳ ಕಾಲ ಕೈಗಾ ಪ್ರೊಜೆಕ್ಟ್ ನಲ್ಲಿ ಇದ್ದು ನಂತರ ತಮಿಳು ನಾಡು ಮತ್ತು ಹರಿಯಾಣ ರಾಜ್ಯಗಳಲ್ಲಿ ಸ್ಥಾವರಗಳ ಕೆಲಸ ಪೂರೈಸಿ 2022 ರಲ್ಲಿ ಪುನಃ ಕೈಗಾ ಸ್ಥಾವರದ 5 ಮತ್ತು 6 ನೇ ಘಟಕಗಳ ಯೋಜನಾ ಡೈರೆಕ್ಟರ್ ಆಗಿ ಬಡ್ತಿ ಪಡೆದು ಕೈಗಾ ಕ್ಕೆ ನಿಯುಕ್ತಿಗೊಂಡರು.ಇವರ ಸೇವಾವಧಿಯಲ್ಲಿ ಅತ್ಯುತ್ತಮ ಶ್ರೇಣಿಯ ಇಂಜಿನಿಯರ್ ಎಂದು ಹಲವು ಪ್ರಶಸ್ತಿಗಳನ್ನು ಕೂಡಾ ಪಡೆದಿರುತ್ತಾರೆ. ಇವರು ಅ.31 ರಂದು 35 ವರ್ಷಗಳ ಸೇವೆಯ ಬಳಿಕ ಸೇವಾ ನಿವೃತ್ತಿಹೊಂದಲಿದ್ದಾರೆ.
ಇವರು ಸುಳ್ಯ ತಾಲೂಕಿನ ಕೂತ್ಕುಂಜ ಗ್ರಾಮದ ಪಂಜ – ಬೇರ್ಯ ದಲ್ಲಿ ಜನಿಸಿ, ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ವನ್ನು ಪಂಜದಲ್ಲಿ ಮತ್ತು ಪದವಿ ಪೂರ್ವ ಶಿಕ್ಷಣ ವನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪೊರೈಸಿರುತ್ತಾರೆ.ನಂತರ ಮಂಡ್ಯದ ಪಿ.ಈ.ಎಸ್.ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ಡಿಗ್ರಿ ಪಡೆದಿರುತ್ತಾರೆ.
ಇವರು ದಿ.ಪಠೇಲ್ ಕುಶಾಲಪ್ಪ ಗೌಡ ಮತ್ತು ದಿ.ಜಾನಕಿ ಯವರ ಪುತ್ರ.ಇವರ ಪತ್ನಿ ಶ್ರೀಮತಿ ಕವಿತಾರವರು ನಿವೃತ್ತ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಸಂಕಪ್ಪ ಗೌಡ ನೀರ್ಪಾಡಿ ಮತ್ತು ಶ್ರೀಮತಿ ಭವಾನಿ ದಂಪತಿಗಳ ಪುತ್ರಿ.ಇವರ ಮಗಳು ಶ್ರೀಮತಿ ಡಾl ಶಿಭಾನಿ MD ಮತ್ತು ಅಳಿಯ ಡಾl ಭರತೇಶ್ MD (DM) , ಮಗ ಹರ್ಷಿಲ್ B E ಇಂಜಿನಿಯರ್ ರಾಗಿ ಉದ್ಯೋಗದಲ್ಲಿ ದ್ದಾರೆ.