2022-23ನೇ ಸಾಲಿನಲ್ಲಿ ನಡೆದ 4ನೇ ವರ್ಷದ ಅಂತಿಮ ಬಿ.ಎಸ್ಸಿ. ನರ್ಸಿಂಗ್ ವ್ಯಾಸಂಗದಲ್ಲಿ ಶ್ರದ್ಧಾ ಕೊಡಪಾಲ ಶೇ.84.6 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾಳೆ.
ಶಿವಮೊಗ್ಗದ ತಡಿಕೆಲ ಸುಬ್ಬಯ್ಯ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಈಕೆ ನೆಲ್ಲೂರು ಕೆಮ್ರಾಜೆ ಗ್ರಾಮದ ಕೊಡಪಾಲ ನಿವಾಸಿ, ಬೊಳ್ಳಾಜೆ ಅಂಚೆ ಪಾಲಕ ಕೇಶವ ಬಾಳೆಗುಂಡಿ ಮತ್ತು ಶ್ರೀಮತಿ ನಳಿನಿ ದಂಪತಿಗಳ ಪುತ್ರಿ. ಕು| ಶ್ರೇಯ ಸಹೋದರಿ.
.