ಲೈನ್ ಮೇನ್ ಗೆ ಹಲ್ಲೆ ಆರೋಪ : ಮೆಸ್ಕಾಂ ಎ.ಇ. – ಗ್ರಾಹಕ ಆಡಿಯೋ ವೈರಲ್ ಪ್ರಕರಣ

0

ರಾಜಿ ಇತ್ಯರ್ಥ : ಎರಡೂ ಕಡೆಯವರಿಂದ ಮುಚ್ಚಳಿಕೆ

ಅ.28 ರಂದು ಓಡಬಾಯಿಯಲ್ಲಿ ಹೋಟೆಲ್ ‌ಮಾಲಕರೊಬ್ಬರು ಲೈನ್ ಮೇನೆ ಗೆ ಹಲ್ಲೆ ನಡೆಸಿದ ಆರೋಪ ಹಾಗೂ ಮುಂದುವರಿದು ಮೆಸ್ಕಾಂ ಎ.ಇ. ಹಾಗೂ ಶೋ ರೂಂ ಮಾಲಕರ ನಡುವಿನ ವಾಗ್ವಾದ ಪ್ರಕರಣ ರಾಜಿಯಲ್ಲಿ ಇತ್ಯರ್ಥವಾಗಿರುವುದಾಗಿ ತಿಳಿದುಬಂದಿದೆ.

ವಿದ್ಯುತ್ ಬಿಲ್ ಪಾವತಿಸಿಲ್ಲ ಎಂಬ ಕಾರಣ ನೀಡಿ ಓಡಬಾಯಿ ಹೋಟೆಲ್ ಒಂದರ ವಿದ್ಯುತ್ ಸಂಪರ್ಕವನ್ನು ಆ ಭಾಗದ ಲೈನ್ ಮೇನ್ ಹೋಟೆಲ್ ನ ವಾಣಿಜ್ಯ ಸಂಕೀರ್ಣದ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದರು. ಈ ವೇಳೆ ಹೋಟೆಲ್ ‌ಮಾಲಕ ಮತ್ತು ಲೈನ್ ಮೇನ್ ಮಧ್ಯ‌ ಚಕಮಕಿ ನಡೆದು ಹೋಟೆಲ್ ‌ಮಾಲಕ ಹಲ್ಲೆ ನಡೆಸಿದರೆಂದು ಆರೋಪಿಸಲಾಗಿತ್ತು.

ಈ ಘಟನೆ ಮುಂದುವರಿದು ಮೆಸ್ಕಾಂ ಎ.ಇ. ಸುಪ್ರೀತ್ ರಿಗೆ ಹೋಟೆಲ್ ನ ವಾಣಿಜ್ಯ ಸಂರ್ಕೀಣದಲ್ಲಿರುವ ಶೋ ರೂಂ ಮಾಲಕರು ದೂರವಾಣಿ ಕರೆ ಮಾಡಿ ವಿದ್ಯುತ್ ಕಡಿತದ ಕುರಿತು ಪ್ರಶ್ನಿಸಿದರು. ಅವರಿಬ್ಬರ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈ ಘಟನೆ ಪೋಲೀಸ್ ಠಾಣೆ ಮೆಟ್ಟಿಲೇರಿದ್ದರೂ ಕೇಸು ಆಗಿರಲಿಲ್ಲ. ಘಟನೆಯ ಕುರಿತು ಮಾಜಿ.ಜಿ.ಪಂ. ಸದಸ್ಯೆ ಹಾಗೂ ಕೆಪಿಸಿಸಿ ಸದಸ್ಯೆ ಸರಸ್ವತಿ ಕಾಮತ್ ಇತ್ತಂಡದವರೊಂದಿಗೆ ಅ.29 ರಂದು ಸುಳ್ಯದಲ್ಲಿ ಮಾತುಕತೆ ನಡೆಸಿದರು. ಎರಡೂ ಕಡೆಯವರಿಂದಲೂ ಘಟನೆಯ ವಿವರ ಪಡೆದು ರಾಜಿ ಇತ್ಯರ್ಥದ ಸಲಹೆ ನೀಡಿದರು.

ಬಳಿಕ ಪೋಲೀಸ್ ಠಾಣೆಗೆ ತೆರಳಿ ಮಾತುಕತೆಯ ವಿವರವನ್ನು ನೀಡಿದರೆಂದು ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಹರೀಶ್ ಕೆ ನಾಯ್ಕ್, ಸಹಾಯಕ ಇಂಜಿನಿಯರ್ ಸುಪ್ರೀತ್ ಎಸ್ ಕುಮಾರ್, ಬೆಳ್ಳಾರೆ ಶಾಖೆಯ ಕಿರಿಯ ಇಂಜಿನಿಯರ್ ಪ್ರಸಾದ್ ಕೆ ವಿ, ಗುತ್ತಿಗೆದಾರ ಸಂಘದ ಸದಸ್ಯರಾಗಿರುವ ಮಧುಕಿರಣ್ ಮತ್ತು ರಾಜೇಶ್ ವೈಭವ್ ಟೈಯರ್ ಸುಳ್ಯ, ಕಿಶನ್ ಹಳೇಗೇಟು, ದಿನೇಶ್ ಅಡ್ಕರ್ ಮೂಕಾಂಬಿಕಾ ,ನವೀನ್ ಯಮಹ ಶೋ ರೂಮ್, ಪದ್ಮನಾಭ ಬೂಡು ಹಾಗೂ ಇಲಾಖಾ ಲೈನ್ ಮ್ಯಾನ್ ರಾಮಪ್ಪ ಹಾಗೂ ಸುಳ್ಯ ಶಾಖೆಯ ಇತರ ಲೈನ್ ಮ್ಯಾನ್ ಗಳು ಉಪಸ್ಥಿತರಿದ್ದರು