ಐವರ್ನಾಡು ಪೇಟೆಯಲ್ಲಿ ಚುನಾವಣೆ ಬಹಿಷ್ಕಾರ ಬ್ಯಾನರ್ ಪ್ರತ್ಯಕ್ಷ …!

0

ನಾಗರೀಕ ಸೇವಾ ಸಮಿತಿ ವತಿಯಿಂದ ಶಾಸಕರಿಗೆ ಮನವಿ

ಸ್ಪಂದಿಸಿದ ಶಾಸಕಿ ಕು.ಭಾಗೀರಥಿ ಮುರುಳ್ಯ – ರಸ್ತೆ ಕಾಂಕ್ರೀಟಿಕರಣದ ಭರವಸೆ

ಐವರ್ನಾಡು ಗ್ರಾಮದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯು ತೀರ ಹದಗೆಟ್ಟಿದ್ದು ಸಾರ್ವಜನಿಕರಿಗೆ ಸಮಸ್ಯೆಯಾಗಿದೆ ಇದನ್ನು ಕೂಡಲೇ ದುರಸ್ಥಿಪಡಿಸಬೇಕು ಇಲ್ಲವಾದಲ್ಲಿ ಮುಂದಿನ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಐವರ್ನಾಡು ನಾಗರಿಕ ಸೇವಾ ಸಮಿತಿಯವರು ಐವರ್ನಾಡು ಪೇಟೆಯಲ್ಲಿ ಬ್ಯಾನರ್ ಅಳವಡಿಸಿದ್ದರು.


ಅ.28 ರಂದು ಶಾಸಕಿ ಭಾಗೀರಥಿ ಮುರುಳ್ಯರವರು ಗ್ರಾಮ ಪಂಚಾಯತ್ ಅಧ್ಯಕ್ಷೆ ಲೀಲಾವತಿ ಕುತ್ಯಾಡಿಯವರ ಮನೆಯಲ್ಲಿ ಪ್ರಧಾನ ಮಂತ್ರಿಯವರ ಮನ್ ಕಿ ಬಾತ್ ಕಾರ್ಯಕ್ರಮದ ನೇರ ವೀಕ್ಷಣೆ ಕಾರ್ಯಕ್ರಮಕ್ಕೆ ಆಗಮಿಸಿದಾಗ ಈ ಬ್ಯಾನರನ್ನು ವೀಕ್ಷಿಸಿದ್ದರು.


ಈ ಸಂದರ್ಭದಲ್ಲಿ ನಾಗರಿಕ ಸಮಿತಿಯವರು ರಸ್ತೆ ದುರಸ್ಥಿ ಬಗ್ಗೆ ಮನವಿ ನೀಡಿ ರಸ್ತೆ ದುರವಸ್ಥೆಯ ಬಗ್ಗೆ ವಿವರಿಸಿದರು.
ಆಗ ಭಾಗೀರಥಿಯವರು ಹಿಂದಿನ ಶಾಸಕರಾಗಿದ್ದ ಎಸ್.ಅಂಗಾರರವರು ಬಿಡುಗಡೆ ಮಾಡಿದ ರೂ. 25 ಲಕ್ಷ ಅನುದಾನ ಮತ್ತು ರೂ.10 ಲಕ್ಷ ಅನುದಾನವನ್ನು ಸೇರಿಸಿ ಹದಗೆಟ್ಟ ರಸ್ತೆಯ ಭಾಗಗಳಿಗೆ ಸುಮಾರು ಅರ್ಧ ಕಿ.ಲೋ ಮೀಟರ್ ದೂರ ಕಾಂಕ್ರೀಟೀಕರಣವನ್ನು ಮಾಡಿಕೊಡುವುದಾಗಿ ತಿಳಿಸಿದರು.


ಮತ್ತು ಸಂಸದರ ಜೊತೆ ಮಾತನಾಡಿ ಉಳಿದ ರಸ್ತೆಯನ್ನು ಸಂಪೂರ್ಣ ಕಾಂಕ್ರೀಟೀಕರಣ ಗೊಳಿಸುತ್ತೇವೆ ಎಂದು ಭರವಸೆ ನೀಡಿದರೆನ್ನಲಾಗಿದೆ.