ದುಗ್ಗಲಡ್ಕ: ಸಿಡಿಲು ಬಡಿದು ಮನೆಗೆ ಅಪಾರ ಹಾನಿ

0


ದುಗ್ಗಲಡ್ಕ ಸಮೀಪದ ಶಕ್ತಿಗುಡ್ಡೆ ಎಂಬಲ್ಲಿ ಸಿಡಿಲು ಬಡಿದು ಮನೆಗೆ ಅಪಾರ ಹಾನಿಯಾದ ಘಟನೆ ನಿನ್ನೆ ರಾತ್ರಿ ನಡೆದಿದೆ.


ನಿನ್ನೆ ರಾತ್ರಿ ಸುರಿದ ಭಾರಿ ಸಿಡಿಲು ಮಳೆಗೆ ಈ ಹಾನಿ ಸಂಭವಿಸಿದೆ.
ಶಕ್ತಿಗುಡ್ಡೆ ನಿವಾಸಿ ಐತ್ತಪ್ಪ ನಾಯ್ಕ ಎಂಬವರ ಮನೆಯ ಸ್ವಿಚ್ ಬೋರ್ಡ್, ವಯರಿಂಗ್, ಫ್ಯಾನ್, ಬಲ್ಬ್ ಸಹಿತ ಹಲವಾರು ವಿದ್ಯುತ್ ಉಪಕರಣಗಳು ಸುಟ್ಟು ಹೋಗಿದೆ. ಗೋಡೆಯೂ ಬಿರುಕು ಬಿಟ್ಟಿರುವುದಾಗಿ ತಿಳಿದುಬಂದಿದೆ.