ಅರಂತೋಡು: ದಿಶಾ ಕಲೆಕ್ಷನ್ ಸ್ಥಳಾಂತರಗೊಂಡು ಶುಭಾರಂಭ

0

ಅರಂತೋಡು ಗ್ರಾಮದ ಪಾನತ್ತಿಲ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿದ್ದ ರವೀಂದ್ರ ಭಟ್ , ಶ್ರೀಮತಿ ದೀಪಾ ಆರ್ ಭಟ್ ಅವರ ಮಾಲಕತ್ವದ ದಿಶಾ ಕಲೆಕ್ಷನ್ ವಸ್ತ್ರ ಮಳಿಗೆಯು ಯಶಸ್ವಿ12 ವರ್ಷಗಳನ್ನು ಪೂರೈಸಿ, ಅರಂತೋಡಿನ ಪುಷ್ಪಾ ಕಾಂಪ್ಲೆಕ್ಸ್ ಗೆ ಸ್ಥಳಾಂತರಗೊಂಡು ನ‌.3ರಂದು ಶುಭಾರಂಭಗೊಂಡಿತು.

ನೂತನ ಮಳಿಗೆಯನ್ನು ಪದ್ಮಶ್ರೀ ಡಾ. ಗಿರೀಶ್ ಭಾರದ್ವಾಜ್ ಅವರು ದೀಪ ಬೆಳಗಿಸಿ, ಉದ್ಘಾಟಿಸಿ, ಶುಭಹಾರೈಸಿದರು‌.

ಮುಖ್ಯ ಅತಿಥಿಗಳಾಗಿ ಅರಂತೋಡು ಗ್ರಾ.ಪಂ. ಅಧ್ಯಕ್ಷ ಕೇಶವ ಅಡ್ತಲೆ, ಅರಂತೋಡು – ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಮಾರುತಿ ಇಂಟರ್ ನ್ಯಾಷನಲ್‌ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ರುಕ್ಮಯ್ಯ ದಾಸ್, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾದರ್, ಸುಳ್ಯ ನ.ಪಂ.‌ಸದಸ್ಯ ಬಾಲಕೃಷ್ಣ ಭಟ್ ಕೊಡೆಂಕಿರಿ, ಅರಂತೋಡು ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್, ಅರಂತೋಡು – ತೊಡಿಕಾನ ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿ ಶ್ರೀಮತಿ ಶೀಲಾ ದಿನಕರ, ಪುಷ್ಪಾ ಕಾಂಪ್ಲೆಕ್ಸ್ ಮಾಲಕ ಈಶ್ವರ ಉಳುವಾರು, ಉಪಸ್ಥಿತರಿದ್ದರು.


ಎ.ಪಿ. ಎಂ.ಸಿ. ಮಾಜಿ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ಅವರು ಕಾರ್ಯಕ್ರಮ ನಿರೂಪಿಸಿದರು.