ಅರಂತೋಡಿನಲ್ಲಿ ದಿ. ಯು.ಡಿ. ಶೇಖರ್ ಅವರ ಸ್ಮರಣಾರ್ಥವಾಗಿ ಅವರ ಪತ್ನಿ ಮತ್ತು ಮಕ್ಕಳು ಕೊಡುಗೆಯಾಗಿ ನಿರ್ಮಾಣ ಮಾಡಿದ ನೂತನ ಪ್ರಯಾಣಿಕರ ತಂಗುದಾಣವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರಾದ ಕೆ. ಅರ್. ಗಂಗಾಧರ್ ಉದ್ಘಾಟನೆ ಅವರು ನ.3ರಂದು ಉದ್ಘಾಟಿಸಿದರು.
ಬಳಿಕ ಕೆ. ಅರ್. ಗಂಗಾಧರ್ ಮತ್ತು ಅರಂತೋಡು ಗ್ರಾಮ ಪಂಚಾಯತ್ ಅಧ್ಯಕ್ಷ ಕೇಶವ ಅಡ್ತಲೆ ಯವರು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಪಿಡಿಒ ದಿl ಯು. ಡಿ. ಶೇಖರ್ ರವರ ಬಗ್ಗೆ ಮಾತನಾಡಿ, ಅವರ ಬಗ್ಗೆ ಗುಣಗಾನ ಮಾಡಿದರು.
ಈ ಸಂದರ್ಭದಲ್ಲಿ ದಿ. ಯು. ಡಿ. ಶೇಖರ್ ಅವರ ಪತ್ನಿ ಉಪ್ಪಿನಂಗಡಿ ಗ್ರಾಮಪಂಚಾಯಿತಿ ಕಾರ್ಯದರ್ಶಿ ಶ್ರೀಮತಿ, ಗೀತಾ ಶೇಖರ್, ಮಗ ಪ್ರಫುಲ್, ಸಹೋದರಿ ಶ್ರೀಮತಿ ವರ್ದಿನಿ,ಮಾಜಿ ಜಿ. ಪಂ. ಸದಸ್ಯ ಹರೀಶ್ ಕಂಜಿಪಿಲಿ, ಸಹಕಾರಿ ಸಂಘ ಅಧ್ಯಕ್ಷ ಸಂತೋಷ ಕುತ್ತಮೊಟ್ಟೆ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಭವಾನಿ ಚಿಟ್ಟನೂರು, ಅರಂತೋಡು – ತೊಡಿಕಾನ ಸಹಕಾರಿ ಸಂಘದ ಉಪಾಧ್ಯಕ್ಷ ದಯಾನಂದ ಕುರುಂಜಿ, ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಉಳುವಾರು, ದೇವಳದ ಮೆನೇಜರ್ ಆನಂದ ಕಲ್ಲಗದ್ದೆ, ಗೂನಡ್ಕ ಶಾರದಾ ಹಿರಿಯ ಪ್ರಾಥಮಿಕ ಶಾಲೆಯ ಸಂಚಾಲಕರಾದ ರಾಮಚಂದ್ರ ಕಲ್ಲಗದ್ದೆ, ಅರಂತೋಡು ಪಿ. ಯು. ಕಾಲೇಜಿನ ಪ್ರಾಂಶುಪಾಲ ರಮೇಶ್, ಮುಖ್ಯಶಿಕ್ಷಕರಾದ ಸೀತಾರಾಮ್, ಆರಂತೋಡು ಭಜನಾ ಮಂದಿರದ ಅಧ್ಯಕ್ಷ ಪದ್ಮನಾಭ ಕುರುಂಜಿ ಕಾರ್ಯದರ್ಶಿ ತೀರ್ಥರಾಮ ಅಡ್ಕಬಳೆ,ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ. ಎಂ. ಶಹೀದ್, ಕಾರ್ಯದರ್ಶಿ ಅಶ್ರಫ್ ಗುಂಡಿ, ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಪುಷ್ಪಮೇದಪ್ಪ,ಮಾಜಿ ಜಿ. ಪಂ. ಸದಸ್ಯ ಸತೀಶ್ ನಾಯ್ಕ,ಆರಂತೋಡು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ, ಮಾಲಿನಿ ವಿನೋದ್, ಪುಷ್ಪಧರ ಕೋಡಂಕೇರಿ, ಸಹಕಾರಿ ಸಂಘದ ನಿರ್ದೇಶಕರಾದ ಚಂದ್ರಶೇಖರ ಚೋಡಿಪಣೆ, ವಿನೋದ್ ಉಳುವಾರ್, ನಿದೀಶ್ ಆರಂತೋಡು,ಸಂತೋಷ್ ಚಿಟ್ಟನೂರು,ಉಳುವಾರು ಕುಟುಂಬದ ನೂಜಿಕಲ್ಲಿನ ಹಿರಿಯರಾದ ಹೂವಯ್ಯ ಗೌಡ, ಮತ್ತು ಉಳುವಾರು ಕುಟುಂಬ ಸದಸ್ಯರು,ಪಾಪುಲರ್ ಎಜುಕೇಷನ್ ನ ನಿರ್ದೇಶಕರು ಳು,ಕಾಲೇಜಿನ ಶಿಕ್ಷಕರ ವೃಂದದವರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ದಿ. ಯು. ಡಿ. ಶೇಖರ್ ಅವರ ಅಭಿಮಾನಿ ಬಳಗದವರು, ಮತ್ತು ಗ್ರಾಮಸ್ಥರು ಭಾಗವಸಿದ್ದರು. ಕಿಶೋರ್ ಕುಮಾರ್ ಉಳುವಾರ್ ಸ್ವಾಗತಿಸಿ ಶ್ರೀಮತಿ ಗೀತಾ ಶೇಖರ್ ವಂದಿಸಿದರು.