ಕರ್ನಾಟಕ ಬಾಲವಿಕಾಸ ಅಕಾಡೆಮಿಯಿಂದ 2023 -24ನೇ ಸಾಲಿನ ಬಾಲಗೌರವ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದ್ದು, 18 ವರ್ಷದ ಒಳಗಿನ ಮಕ್ಕಳು ಕ್ರೀಡೆ, ಸಂಗೀತ, ನೃತ್ಯ, ಬಹುಮುಖ ಪ್ರತಿಭೆ, ಚಿತ್ರಕಲೆ ಹಾಗೂ ವಿಜ್ಞಾನ ಮತ್ತು ಸಂಶೋಧನೆ ಹೀಗೆ 6 ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಯನ್ನು ಮಾಡಿ 2022-23ನೇ ಸಾಲಿನಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದು ಪುರಸ್ಕೃತರಾದ ಮಕ್ಕಳು ಅರ್ಜಿ ಸಲ್ಲಿಸಬಹುದಾಗಿದೆ. ಇಂತಹ ಮಕ್ಕಳು ಪ್ರಸ್ತಾವನೆಯನ್ನು ತಮ್ಮ ಸ್ವಯಂ ದೃಢೀಕೃತ ನಕಲು ದಾಖಲೆಗಳೊಂದಿಗೆ ಹಾಗೂ ಸ್ವವಿವರಗಳನ್ನೊಳಗೊಂಡ ಮನವಿಯೊಂದಿಗೆ ದಿನಾಂಕ:18.11.2023 ತಾರೀಖಿನೊಳಗಾಗಿ ಅಕಾಡೆಮಿಯ ಕೇಂದ್ರ ಕಛೇರಿ ವಿಳಾಸಕ್ಕೆ ಪೋಸ್ಟ್ ಮುಖಾಂತರ ತಲುಪುವಂತೆ ಕಳುಹಿಸುದು, ನಂತರ ಬಂದ ಅರ್ಜಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ.
ಈಗಾಗಲೆ ಬಾಲಗೌರವ ಪ್ರಶಸ್ತಿ ಪಡೆದವರ ಅರ್ಜಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದಿಲ್ಲ. ಪ್ರಶಸ್ತಿಯ ಅರ್ಜಿ ನಮೂನೆ/ಮಾನದಂಡಗಳನ್ನು ಕಛೇರಿಯ ವೆಬ್‌ಸೈಟ್ ಲಿಂಕ್ https://balavikasaacademy.karnataka.gov.in ನಲ್ಲಿ ವೀಕ್ಷಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಸ್ತ್ರೀಶಕ್ತಿ ಭವನ 2ನೇ ಮಹಡಿ ಮೆಸ್ಕಾಂ ಬಳಿ, ಬಿಜೈ ಮಂಗಳೂರು-575004 ಇಲ್ಲಿ ಸಂಪರ್ಕಿಸಬಹುದು ಎಂದು ಯೋಜನಾಧಿಕಾರಿಗಳು ತಿಳಿಸಿದ್ದಾರೆ.