ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಸುಳ್ಯ,,ಗ್ರಾ.ಪಂ. ಕಳಂಜ, ಶ್ರೀರಕ್ಷ ಗೊಂಚಲು ಸಮಿತಿ ಕಳಂಜ ಇದರ ಸಂಯುಕ್ತ ಆಶ್ರಯದಲ್ಲಿ ಶ್ರೀರಕ್ಷ ಗೊಂಚಲು ಮಹಾಸಭೆ ಅಯ್ಯನಕಟ್ಟೆ ಪಂ. ದೀನದಯಾಲ್ ಸಭಾಭವನದಲ್ಲಿ ನ. 04ರಂದು ನಡೆಯಿತು.
ಕಳಂಜ ಗ್ರಾಮದ ಶ್ರೀರಕ್ಷ ಗೊಂಚಲಿನ ಅಧ್ಯಕ್ಷೆ ಶ್ಯಾಮಲ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಸುಳ್ಯ ಬ್ಲಾಕ್ ಸೊಸೈಟಿಯ ಪ್ರತಿನಿಧಿ ಶ್ರೀಮತಿ ಹರಿಣಾಕ್ಷಿ, ಕಳಂಜ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಶಾಂತ್ ಕಿಲಂಗೋಡಿ, ಶ್ರೀರಕ್ಷ ಗೊಂಚಲಿನ ಕಾರ್ಯದರ್ಶಿ ಯಮುನ, ಉಪಾಧ್ಯಕ್ಷೆ ಪುಷ್ಪಾವತಿ, ಖಜಾಂಜಿ ಸುನಂದ ವೇದಿಕೆಯಲ್ಲಿ ಉಪಸ್ಥಿತರಿದ್ದು, ಶುಭ ಹಾರೈಸಿದರು. ಸಮಗ್ರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಜ ಸ್ತ್ರೀ ಶಕ್ತಿ ಸಂಘದ ಬೆಳವಣಿಗೆ, ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಬೆಳ್ಳಾರೆ ವಲಯ ಮೇಲ್ವಿಚಾರಕಿ ಶ್ರೀಮತಿ ಉಷಾ ಪ್ರಸಾದ್ ರೈ ಸ್ತ್ರೀ ಶಕ್ತಿ ಗೊಂಚಲಿನ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸ್ತ್ರೀ ಶಕ್ತಿ ಸಂಘದ ಸದಸ್ಯರುಗಳಿಗೆ ಸ್ಪರ್ಧೆ ನಡೆಸಿ ವಿಜೇತರಿಗೆ ಗೊಂಚಲಿನ ವತಿಯಿಂದ ಬಹುಮಾನ ವಿತರಿಸಿದರು. ಸ್ತ್ರೀ ಶಕ್ತಿ ಸಂಘ ತಂಟೆಪ್ಪಾಡಿಯ ಸದಸ್ಯೆ ವಿಶಾಲಾಕ್ಷಿ ಸ್ವಾಗತಿಸಿ, ಅಯ್ಯನಕಟ್ಟೆ ಸ್ತ್ರೀ ಶಕ್ತಿ ಸಂಘದ ಸದಸ್ಯೆ ರತ್ನಾವತಿ ವಂದಿಸಿದರು. ಸ್ತ್ರೀ ಶಕ್ತಿ ಸಂಘ ತಂಟೆಪ್ಪಾಡಿ ಸದಸ್ಯೆ ನೇತ್ರಾವತಿ ಕಾರ್ಯಕ್ರಮವನ್ನು ನಿರೂಪಿಸಿದರು. ಅಂಗನವಾಡಿ ಕಾರ್ಯಕರ್ತೆಯರು ಸಹಕರಿಸಿದರು. ಕಾರ್ಯಕ್ರಮದಲ್ಲಿ ಸ್ತ್ರೀ ಶಕ್ತಿ ಸಂಘದ ಸದಸ್ಯರುಗಳು, ಆಶಾ ಕಾರ್ಯಕರ್ತರು ಹಾಜರಿದ್ದರು.