ಕನಕಮಜಲು: ಬಾಳೆಹಿತ್ತಿಲು ಶ್ರೀ ವಯನಾಟ್ ಕುಲವನ್ ವಿಷ್ಣುಮೂರ್ತಿ ದೈವಂಕಟ್ಟು ಮಹೋತ್ಸವದ ಜಮಾಖರ್ಚು ಆಡಳಿತ ಸಮಿತಿಗೆ ಹಸ್ತಾಂತರ

0

ಕನಕಮಜಲು ಗ್ರಾಮದ ಬಾಳೆಹಿತ್ತಿಲು ಶ್ರೀ ವಯನಾಟ್ ಕುಲವನ್ ಶ್ರೀ ವಿಷ್ಣುಮೂರ್ತಿ ದೈವಂ ಕಟ್ಟು ಮಹೋತ್ಸವವು ಕಳೆದ ಮಾರ್ಚ್ ತಿಂಗಳಲ್ಲಿ ಅತ್ಯಂತ ಯಶಸ್ವಿಯಾಗಿ, ವಿಜೃಂಭಣೆಯಿಂದ ಸಂಪನ್ನಗೊಂಡಿದ್ದು, ದೈವಂಕಟ್ಟು ಮಹೋತ್ಸವ ಸಮಿತಿಯ ವತಿಯಿಂದ ದೈವಂಕಟ್ಟು ಮಹೋತ್ಸವದ ಜಮಾ -ಖರ್ಚುಗಳ ಅಂತಿಮ ಲೆಕ್ಕಾಚಾರವನ್ನು ಶ್ರೀ ವಯನಾಟ್ ಕುಲವನ್ ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಆಡಳಿತ ಸಮಿತಿಯವರಿಗೆ ಅ.31ರಂದು ಹಸ್ತಾಂತರಿಸಲಾಯಿತು.

ದೈವಂಕಟ್ಟು ಮಹೋತ್ಸವದ ಪ್ರಯುಕ್ತ ಒಟ್ಟು ರೂ.55,64,294 ಸಂಗ್ರಹವಾಗಿದ್ದು, ರೂ.48,21,658 ಒಟ್ಟಾರೆ ಖರ್ಚಾಗಿದ್ದು, ರೂ.7,42,636 ಉಳಿಕೆಯಾಗಿದ್ದು,
ಈ ಪೈಕಿ ರೂ.7,40,000 ಮೊತ್ತವನ್ನು ಇನ್ನು ಮುಂದೆ ಭವಿಷ್ಯದಲ್ಲಿ ನಡೆಸಲಾಗುವ ದೈವಂ ಕಟ್ಟು ಮಹೋತ್ಸವ ಸಮಿತಿಯವರಿಗೆ ಹಸ್ತಾಂತರಿಸುವ ಷರತ್ತಿನೊಂದಿಗೆ ಆಡಳಿತ ಸಮಿತಿ ಯ ಅಧ್ಯಕ್ಷರು ಮತ್ತು ಕೋಶಾಧಿಕಾರಿಯವರ ಜಂಟಿ ಹೆಸರಿನಲ್ಲಿ ಕನಕಮಜಲು ವ್ಯ. ಸೇ. ಸ. ಸಂಘದಲ್ಲಿ ಮುಂದಿನ ಹತ್ತು ವರ್ಷಗಳ ಅವಧಿಗೆ ನಿರಖು ಠೇವಣಿ ಖಾತೆಯನ್ನು ತೆರೆಯಲಾಗಿರುತ್ತದೆ ಎಂದು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ದೈವಂಕಟ್ಟು ಮಹೋತ್ಸವ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಶ್ರೀ ವಿಷ್ಣುಮೂರ್ತಿ ದೈವಸ್ಥಾನದ ಆಡಳಿತ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಮೊಕ್ತೇಸರರು ಹಾಗೂ ಅಡ್ಕಾರು ಕುಟುಂಬಸ್ಥರು ಉಪಸ್ಥಿತರಿದ್ದರು.