ಪಂಜ ಪಂಚಶ್ರೀ ಆಂಬ್ಯುಲೆನ್ಸ್ ನಲ್ಲಿ ಹೆರಿಗೆ

0

ಹೆರಿಗೆಯ ಹೊಟ್ಟೆ ನೋವೆಂದು ಆಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ಹೋಗುತ್ತಿದ್ದಾಗ ದಾರಿ ಮಧ್ಯೆ ತಾಯಿ ಮಗುವಿಗೆ ಜನ್ಮ ನೀಡಿದ ಘಟನೆ ನ.9.ರಂದು ಪಂಜದಿಂದ ವರದಿಯಾಗಿದೆ.


ಸುರೇಶ್ ಎಂಬವರ ಪತ್ನಿ ಗಾಯತ್ರಿ ಎಂಬವರಿಗೆ ಹೆರಿಗೆ ಹೊಟ್ಟೆ ನೋವು ಬಂದುದರಿಂದ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಅಂಬ್ಯುಲೆನ್ಸ್ ಗೆ ನ.9 ರಂದು ಮುಂಜಾನೆ ಕರೆ ಮಾಡಿದ್ದರು.ತಕ್ಷಣ ದಯಾನಂದ ಬೇರ್ಯ ರವರು ಅಂಬ್ಯುಲೆನ್ಸ್ ನಲ್ಲಿ ಕಡಬ ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಹೋಗುತ್ತಿದ್ದರು.

ಆದರೆ ಪುಳಿಕುಕ್ಕು ತಲುಪುವಾಗ ಅಂಬ್ಯುಲೆನ್ಸ್ ನಲ್ಲಿ ಗಾಯತ್ರಿ ಯವರು ಗಂಡು ಮಗುವಿಗೆ ಜನ್ಮ ನೀಡಿದ್ದು ಬಳಿಕ ಕಡಬ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ, ಮಗು ಆರೋಗ್ಯವಾಗಿದ್ದಾರೆ. ಎಂದು ತಿಳಿದು ಬಂದಿದೆ.ಪಂಚಶ್ರೀ ಅಂಬ್ಯುಲೆನ್ಸ್ ನಲ್ಲಿ ಇದು ಮೂರನೆ ಹೆರಿಗೆ ಎಂದು ಕ್ಲಬ್ ನ ಅಧ್ಯಕ್ಷ ಪವನ್ ಪಲ್ಲತ್ತಡ್ಕ ಪತ್ರಿಕೆಗೆ ತಿಳಿಸಿದ್ದಾರೆ.