SUDDI SPECIAL

0

ದೀಪಾವಳಿ ಕಾರ್ತಿಕ ತಿಂಗಳಲ್ಲಿ ಬರುತ್ತದೆ. ಐದು ದಿನಗಳ ಕಾಲ ಆಚರಿಸುವ ದೊಡ್ಡ ಹಬ್ಬ. ಪ್ರತಿ ದಿನವೂ ವಿಶೇಷವಾದ ಪದ್ಧತಿ ಹಾಗೂ ಆಚರಣೆಯಿಂದ ಕೂಡಿರುತ್ತದೆ. ಹಿಂದೂ ಪಂಚಾಂಗದ ಪ್ರಕಾರ ಈ ಅಮವಾಸ್ಯೆಯಿಂದ ಹೊಸ ಚಂದ್ರನ ವರ್ಷವಾಗಿ ಪ್ರಾರಂಭವಾಗುತ್ತದೆ. ಅಲ್ಲದೆ ಈ ದಿನದಲ್ಲಿ ಸೂರ್ಯ ಮತ್ತು ಚಂದ್ರನ ಪೂರ್ಣ ಜೋಡಣೆಯಂತೆ ಗ್ರಹಗಳ ಸ್ಥಾನಗಳು ಹಾಗೂ ಸಂಚಾರ ಬಹಳ ಅನುಕೂಲಕರವೆಂದು ಹೇಳಲಾಗುತ್ತದೆ.

ಈ ಸಮಯವು ಹೊಸ ಉದ್ಯೋಗದ ಆರಂಭಕ್ಕೆ, ಮಂಗಳಕರ ಕಾರ್ಯದ ಕೆಲಸ ಆರಂಭಕ್ಕೆ ಹಾಗೂ ಚಿನ್ನಗಳಂತಹ ಅಮೂಲ್ಯ ವಸ್ತಯಗಳ ಖರೀದಿಗೆ ಸೂಕ್ತವಾದದ್ದು ಎಂದು ಹೇಳಲಾಗುತ್ತದೆ. ದೀಪಾವಳಿಯ ಸಮಯದಲ್ಲಿ ಸೂರ್ಯ ಮತ್ತು ಚಂದ್ರನು ತುಲಾರಾಶಿಗೆ ಪ್ರವೇಶಿಸುತ್ತಾರೆ ಎನ್ನುತ್ತಾರೆ. ತುಲಾ ಎನ್ನುವುದು ವ್ಯಾಪಾರ ಮತ್ತು ವೃತ್ತಿಪರ ಜೀವನವನ್ನು ನಿಯಂತ್ರಿಸುವ ಸಂಕೇತವಾಗಿದೆ. ಇದು ದೀಪಾವಳಿ ವ್ಯವಹಾರಗಳಿಗೆ ಬಹಳ ಮಂಗಳಕರವಾದದ್ದು. ಹಾಗಾಗಿಯೇ ಕಾರ್ತಿಕ ಮಾಸದಲ್ಲಿ ಬರುವ ಅಮವಾಸ್ಯೆಯು ಉಳಿದ ದಿನಗಳಲ್ಲಿ ಬರುವ ಅಮವಾಸ್ಯೆಗಿಂತ ಭಿನ್ನವಾಗಿದೆ ಎನ್ನಲಾಗುತ್ತದೆ.

ಅಮಾವಾಸ್ಯೆಯ ದಿನ ದೀಪಾವಳಿಯನ್ನು ಆಚರಿಸಲು ಇನ್ನೊಂದು ಕಾರಣವೆಂದರೆ ಸೂರ್ಯ ತನ್ನ ದುರ್ಬಲವಾದ ಹಂತದ ಸಮಯದಲ್ಲಿ ಚಂದ್ರನು ಶಕ್ತಿಶಾಲಿಯಾಗಿ ಪ್ರಕಾಶವನ್ನು ಬೀರದ ದಿನ. ಕಡು ಕತ್ತಲು ಆವೃತ್ತಗೊಳ್ಳುವ ದಿನವಾಗಿದೆ. ಇಂದು ಹಣತೆಗಳ ದೀಪ ಬೆಳಗಿ ಬೆಳಕನ್ನು ಚಲ್ಲಲಾಗುತ್ತದೆ.

ನಮ್ಮ ಪೂರ್ವಜರ ನಂಬಿಕೆಯ ಪ್ರಕಾರ ಈ ಸಮಯದಲ್ಲಿ ದೇವರ ಕುರಿತು ಪ್ರಾರ್ಥನೆ ಮತ್ತು ಪೂಜೆಯನ್ನು ಸಲ್ಲಿಸಬೇಕು. ದೇವರಿಗೆ ಪ್ರಾರ್ಥನೆ ಮಾಡುವುದರಿಂದ ದೇವರ ಕೃಪೆಗೆ ಒಳಗಾಗಿ ಕಟ್ಟಶಕ್ತಿಯನ್ನು ತಡೆದು, ಉತ್ತಮ ಶಕ್ತಿಯನ್ನು ಉತ್ತೇಜಿಸುವ ಶಕ್ತಿಯು ಲಭಿಸುತ್ತದೆ. ಹಾಗಾಗಿಯೇ ಈ ದೀಪಾವಳಿಯ ಹಬ್ಬವು ಬಹಳ ಪವಿತ್ರ ಹಾಗೂ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.