ಆಲೆಟ್ಟಿ ಗ್ರಾಮದ ಏಣಾವರ ಶ್ರೀ ವಯನಾಟ್ ಕುಲವನ್ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯದ ಕುರಿತು ಪೂರ್ವ ಭಾವಿ ಸಭೆಯು ನ.12 ರಂದು ದೈವಸ್ಥಾನದ ವಠಾರದಲ್ಲಿ ನಡೆಯಿತು.
ದೀಪಾವಳಿ ಹಬ್ಬ ಕಳೆದ ನಂತರದ ದಿನಗಳಲ್ಲಿ ದೈವಸ್ಥಾನದ ಅಡಿಪಾಯದ ಕೆಲಸ ಕಾರ್ಯಗಳು ತ್ವರಿತಗತಿಯಲ್ಲಿ ನಡೆಸುವುದಾಗಿ ತೀರ್ಮಾನಿಸಲಾಯಿತು. ಜೀರ್ಣೋದ್ಧಾರ ಕಾರ್ಯಕ್ಕೆ ಅವಶ್ಯಕ ಸಾಮಾಗ್ರಿಗಳನ್ನು ವಸ್ತು ರೂಪದಲ್ಲಿ ಒದಗಿಸಿಕೊಡುವ ಬಗ್ಗೆ ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಸತ್ಯಪ್ರಸಾದ್ ಗಬ್ಬಲ್ಕಜೆ, ನಿವೃತ್ತ ಮುಖ್ಯ ಶಿಕ್ಷಕ ವೇಣುಗೋಪಾಲ ಕೊಯಿಂಗಾಜೆ, ಕುತ್ತಿಕೋಲು ತಂಬುರಾಟ್ಟಿ ಭಗವತಿ ಕ್ಷೇತ್ರದ ಕೇಂದ್ರ ಸಮಿತಿಕಾರ್ಯದರ್ಶಿ ಪವಿತ್ರನ್ ಗುಂಡ್ಯ, ಜೆ.ಕೆ.ರೈ ನಾರ್ಕೋಡು, ಸತೀಶ್ ನೂಜಾಲು, ದೇವಿಪ್ರಸಾದ್ ಬಾಳೆಕೊಚ್ಚಿ , ಚಂದ್ರಶೇಖರ ಏಣಾವರ, ಶ್ರೀಧರ ಏಣಾವರ, ತಿಮ್ಮಪ್ಪ ಬಾಳೆಹಿತ್ಲು,ಸೋಮಶೇಖರ ನಡುಮನೆ, ಪುರುಷೋತ್ತಮ ನಡುಮನೆ,ರಾಜೇಶ್ ನಡುಮನೆ,ಪದ್ಮನಾಭ ನಡುಮನೆ ,ಮಾಲಿಂಗ ಏಣಾವರ ಮತ್ತಿತರರು ಉಪಸ್ಥಿತರಿದ್ದರು.