ಕಾಣಿಯೂರು : ಯುವಕನಿಂದ ಬಾಲಕಿಗೆ ಲೈಂಗಿಕ ಕಿರುಕುಳ – ಪೋಕ್ಸೋ ಪ್ರಕರಣ ದಾಖಲು

0

ಕಾಣಿಯೂರಿನಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯ ಪೋಕ್ಸೋ ಪ್ರಕರಣ ದಾಖಲಾದ ಘಟನೆ ನ.13 ರಂದು ನಡೆದಿದೆ.
ಕಾಣಿಯೂರಿನ ಪೈಕ ಪೆರಿಂಜೆ ಎಂಬಲ್ಲಿಗೆ ಹೊರ ರಾಜ್ಯದ ಕುಟುಂಬವೊಂದು ಕೂಲಿ ಕೆಲಸಕ್ಕೆ ಬಂದಿತ್ತು.ಈ ಕುಟುಂಬದ ಬಾಲಕಿಯೋರ್ವಳಿಗೆ ನಾಗೇಶ ಎಂಬಾತ ಲೈಂಗಿಕ ಕಿರುಕುಳ ನೀಡಿದ್ದು ಈ ಬಗ್ಗೆ ಬಾಲಕಿಯ ತಂದೆ ಬೆಳ್ಳಾರೆ ಠಾಣೆಯಲ್ಲಿ ಪೊಲೀಸ್ ದೂರು ನೀಡಿದ್ದು.
ಆರೋಪಿಯನ್ನು ಬಂಧಿಸಿದ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿರುವುದಾಗಿ ತಿಳಿದು ಬಂದಿದೆ.