ವಿನೋಬನಗರ : ಬೈಕ್ ಗೆ ಹಿಂಬದಿಯಿಂದ ಬೈಕ್ ಢಿಕ್ಕಿ ಜಖಂ

0

ಬೈಕ್ ಸವಾರನೋರ್ವ ತನ್ನ ಮನೆ ಕಡೆಗೆ ತೆರಳಲು ಬೈಕ್ ತಿರುಗಿಸುತ್ತಿದ್ದ ವೇಳೆ ಹಿಂಬದಿಯಲ್ಲಿದ್ದ ಬೈಕ್ ನಿಯಂತ್ರಣ ಸಿಗದೆ ಢಿಕ್ಕಿಯಾಗಿ ಜಖಂಗೊಂಡ ಘಟನೆ ಜಾಲ್ಸೂರು ಗ್ರಾಮದ ವಿನೋಬನಗರದಲ್ಲಿ ನ.13ರಂದು ರಾತ್ರಿ ಸಂಭವಿಸಿದೆ.

ವಿನೋಬನಗರದ ಬಾಲಕೃಷ್ಣ ಎಂಬವರು ತನ್ನ ಬೈಕನ್ನು ವಿವೇಕಾನಂದ ಶಾಲೆಯ ಬಳಿಯ ರಸ್ತೆಗೆ ತಿರುಗಿಸುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಬೈಕ್ ಸವಾರ ಢಿಕ್ಕಿ ಹೊಡೆದಿದ್ದು, ಸವಾರರು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದು, ಎರಡೂ ಬೈಕ್ ಗಳು ಜಖಂಗೊಂಡಿರುವುದಾಗಿ ತಿಳಿದುಬಂದಿದೆ.