ನಿವೃತ್ತ ಪಿಡಿಒ ಮಣಿಯಾನ ಪುರುಷೋತ್ತಮರಿಗೆ ಸನ್ಮಾನ

0

ಸುಳ್ಯ ಶಿಕ್ಷಣ ಇಲಾಖೆಯ ನಿವೃತ್ತ ಅಧೀಕ್ಷಕರಾದ ಚಿನ್ನಪ್ಪ ಗೌಡ ಮುಚ್ಚಾರರವರ ಮನೆಯಲ್ಲಿ ಮಕ್ಕಳು, ಸೊಸೆಯಂದಿರು, ನೆಂಟರಿಷ್ಟರ ಸಮ್ಮುಖದಲ್ಲಿ ನಿವೃತ್ತ ಪಿಡಿಒ ಮಣಿಯಾನ ಪುರುಷೋತ್ತಮರಿಗೆ ಸನ್ಮಾನ ಕಾರ್ಯಕ್ರಮವು ನ.11 ರಂದು ಜರಗಿತು.
ಮಣಿಯಾನ ಪುರುಷೋತ್ತಮ ದಂಪತಿಗಳಿಗೆ ದಿನೇಶ್ ಕುಮಾರ್ ಮೈಸೂರು ದಂಪತಿ ಮತ್ತು ಮಗ ಇವರು ಶಾಲು ಹೊದಿಸಿ ಶುಭ ಹಾರೈಸಿದರು.
ಮುಚ್ಚಾರ ಚಿನ್ನಪ್ಪ ಗೌಡ ದಂಪತಿ ಮತ್ತು ಮಕ್ಕಳು ಶಾಲು ಹೊದಿಸಿ, ಫಲಪುಷ್ಪ ಸ್ಮರಣಿಕೆ ಮತ್ತು ಉಡುಗೊರೆ ನೀಡಿ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ರೋಶನ್ ಸ್ವಾಗತಿಸಿ, ಹವ್ಯಾಸ್ ವಂದನಾರ್ಪಣೆ ಮಾಡಿದರು.