ಬೆಳ್ಳಾರೆ ಮುಖ್ಯರಸ್ತೆ ಲಕ್ಷ್ಮೀಜಾತ ಕಾಂಪ್ಲೆಕ್ಸ್ ನಲ್ಲಿ ಭವ್ಯ ಶ್ರೀ ದೀಕ್ಷಿತ್ ರವರ ಮಾಲಕತ್ವದ ದೈವಿಕ ಬ್ಯೂಟಿ ಪಾರ್ಲರ್ ಮತ್ತು ಮೇಕಪ್ ಸ್ಟುಡಿಯೋ ನ.16 ರಂದು ಶುಭಾರಂಭಗೊಂಡಿತು.
ಪುತ್ತೂರು ಶ್ರೀಮಾ ಬ್ಯೂಟಿ ಪಾರ್ಲರ್ ಮಾಲಕರಾದ ಶ್ರೀಮತಿ ಮಾಧವಿ ಮನೋಹರ್ ರೈಯವರು ರಿಬ್ಬನ್ ಕಟ್ ಮಾಡಿ ಬಳಿಕ ದೀಪ ಬೆಳಗಿಸಿ ನೂತನ ಬ್ಯೂಟಿ ಪಾರ್ಲರ್ ಉದ್ಘಾಟಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಕೆಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶರತ್ ಕುಮಾರ್ ಮಾಡಾವು,ಕೆಯ್ಯೂರು ಕೆಪಿಎಸ್ ಕಾರ್ಯಾಧ್ಯಕ್ಷ ಎ.ಕೆ.ಜಯರಾಮ ರೈ, ಪೆರುವಾಜೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಸುನಿಲ್ ರೈ ಪೆರುವಾಜೆ,ಶ್ರೀಮತಿ ಕಮಲ, ದೀಕ್ಷಿತ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಬ್ಯೂಟಿ ಪಾರ್ಲರ್ ಸಂಪೂರ್ಣ ಹವಾನಿಯಂತ್ರಿತ ಬ್ಯೂಟಿಪಾರ್ಲರ್ ಆಗಿದ್ದು ಐಬ್ರೋಸ್,ಹೇರ್ ಕಟ್,ಫೇಶಿಯಲ್,ಪೆಡಿಕ್ಯೂರ್,ಮೆನಿಕ್ಯೂರ್,ಹೇರ್ ಸ್ಟೈಟಿಂಗ್,ಹೇರ್ ಸ್ಪಾ,ಬ್ರೈಡಲ್ ಮೇಕಪ್,ಹೇರ್ ಕಲರಿಂಗ್ ಸೌಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.