ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಗಡಿಪಾರು ನೋಟೀಸು ನೀಡಿರುವ ಸರಕಾರದ ನಡೆ ಖಂಡನೀಯ

0

ಹಿಂದೂ ಸಂಘಟನೆಯ ಪ್ರಮುಖರಿಂದ ಪತ್ರಿಕಾಗೋಷ್ಠಿ

ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ವಿನಾ ಕಾರಣ ದುರುದ್ದೇಶಪೂರಕವಾಗಿ ಹತ್ತಿಕ್ಕುವ ಕಾರ್ಯಕ್ಕೆ ಮುಂದಾಗಿರುವ ರಾಜ್ಯ ಸರಕಾರ ಹಾಗೂ ಪೋಲಿಸ್ ಇಲಾಖೆಯ ನಡೆಯನ್ನು ಖಂಡಿಸಿ ಹಿಂದೂ ಪರಿವಾರದ ಸಂಘಟನೆಯ ಮುಖಂಡರು ಇಂದು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.

ಸುಳ್ಯ ಪ್ರಖಂಡ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಅಧ್ಯಕ್ಷ ಸೋಮಶೇಖರ ಪೈಕ ರವರು ಮಾತನಾಡಿ ಹಿಂದೂ ಪರ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಯುವಕರ ಆತ್ಮ ಸ್ಥೈರ್ಯ ಕುಗ್ಗಿಸುವ ಕಾರ್ಯ ತಂತ್ರಕ್ಕೆ ಮುಂದಾದ ಸರಕಾರದ ನಡೆಯನ್ನು ಖಂಡಿಸುತ್ತೇವೆ. ಬಡ ಹಿಂದೂ ಕಾರ್ಯಕರ್ತರ ಮೇಲೆ ಗಡಿ ಪಾರು ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಇಲ್ಲವಾದಲ್ಲಿ ತಾಲೂಕಿನಾದ್ಯಂತ ಪ್ರತಿಭಟನೆ ನಡೆಸುತ್ತೇವೆ ಎಂದು ಅವರು ಹೇಳಿದರು.

ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ
ಬಡ ಹಿಂದೂ ಕಾರ್ಯಕರ್ತ ಲತೀಶ್ ಗುಂಡ್ಯ ಎಂಬ ಯುವಕನ್ನು ಬಳ್ಳಾರಿ ಜಿಲ್ಲೆಗೆ ಗಡಿಪಾರು ಮಾಡಲು ಮುಂದಾಗಿರುವ ರಾಜ್ಯ ಸರಕಾರ ಹಾಗೂ ಪೋಲಿಸ್ ಇಲಾಖೆಯು ಹಿಂದೂ ಸಂಘಟನೆಯ ಕಾರ್ಯಕರ್ತರನ್ನು ಹತ್ತಿಕ್ಕುವ ಕಾರ್ಯಕ್ಕೆ ಮುಂದಡಿ ಇಟ್ಟಿದೆ. ಕಾಂಗ್ರೆಸ್ ಸರಕಾರ ಮುಸ್ಲಿಂ ಸಮುದಾಯದ ಒಲೈಕೆಗಾಗಿ ಹಿಂದೂ ಕಾರ್ಯಕರ್ತರನ್ನು ಧಮನಿಸಲು ಮುಂದಾಗಿರುವುದು ಖಂಡನೀಯ.


ಹಿಂದೂ ಧರ್ಮದಲ್ಲಿ ಗೋವಿಗೆ ವಿಶೇಷ ಪೂಜನೀಯ ಸ್ಥಾನವಿದೆ. ಅಂತಹ ಗೋವುಗಳನ್ನು ಕಳ್ಳತನ ಮಾಡುವ ಸಮಯದಲ್ಲಿ ಗೋವುಗಳನ್ಬು ರಕ್ಷಿಸಲು ಪ್ರಯತ್ನಿಸುವುದು ಅಪರಾಧವೇ ? ಲವ್ ಜಿಹಾದ್ ಮೂಲಕ ಮತಾಂತರ ಮಾಡುವವರನ್ನು ಪ್ರಶ್ನಿಸಿದ್ದು ತಪ್ಪಾಗುವುದೇ?
ದೇಶ ವಿರೋಧಿ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ಕಾರ್ಯಕರ್ತರನ್ನು ನೈತಿಕ ಪೋಲಿಸ್ ಗಿರಿ ಎಂಬ ಹಣೆ ಪಟ್ಟಿ ಕಟ್ಟಿ ಗಡಿಪಾರು ಎಂಬ ಶಿಕ್ಷೆಗೆ ಒಳಪಡಿಸಿರುವ ಸರಕಾರದ ಹಾಗೂ ಪೋಲಿಸ್ ಇಲಾಖೆಯ ಧೋರಣೆಯನ್ನು ಖಂಡಿಸುತ್ತೇವೆ.


ಈ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಇಲ್ಲದಿದ್ದರೆ ಸರಕಾರದ ವಿರುದ್ಧ ಹಿಂದೂ ಸಮಾಜದ ಎಲ್ಲಾ ಬಾಂಧವರು ಸಂಘಟಿತರಾಗಿ
ಪ್ರತಿಭಟಿಸಲು ಹಿಂಜರಿಯುವುದಿಲ್ಲ.
ಸುಳ್ಯದ ಪೋಲಿಸ್ ಸಬ್ ಇನ್ಸ್ಪೆಕ್ಟರ್ ಈರಯ್ಯ ರವರು ಒಬ್ಬ ಪ್ರಾಮಾಣಿಕ ಅಧಿಕಾರಿ ಎಂದು ಭಾವಿಸಿದ್ದೇನೆ. ಆದರೆ ಅವರು ಯಾರದೋ ಒತ್ತಡಕ್ಕೆ ಮಣಿದು ಕರ್ತವ್ಯದಲ್ಲಿ ಲೋಪವೆಸಗುತ್ತಿದ್ದಾರೆ.


ಇದೇ ರೀತಿಯಾಗಿ ಇಲಾಖೆಯಲ್ಲಿ ಮುಂದುವರಿದರೆ ಹಿಂದೂ ಸಮಾಜದ ಸಂಘಟನೆಗಳು ಒಟ್ಟು ಸೇರಿ ಪೋಲಿಸ್ ಠಾಣೆಯ ಎದುರಿನಲ್ಲಿ ಪ್ರತಿಭಟಿಸುತ್ತೇವೆ.

ಹಿಂದೂ ಧರ್ಮದ ಭಾವನೆಗಳಿಗೆ ದಕ್ಕೆ ತಂದು ಆಕ್ರಮಣ ಮಾಡುವ ದುಷ್ಟ ಶಕ್ತಿಯ ವಿರುದ್ಧ ಪ್ರಶ್ನಿಸಲು ಮುಂದಾದ ಕಾರ್ಯಕರ್ತರ ವಿರುದ್ಧ ಗಡಿಪಾರು ಶಿಕ್ಷೆಗೆ ಗುರಿಪಡಿಸಿರುವುದರ ಹಿಂದೆ ಹಿಂದೂ ಸಮಾಜದ ಸಂಘಟನಾ ಶಕ್ತಿಯನ್ನು ಧಮನಿಸುವ ಕಾರ್ಯಕ್ಕೆ ಸರಕಾರ ಹಾಗೂ ಪೋಲಿಸ್ ಇಲಾಖೆ ಮುಂದಾಗಿರುವುದನ್ನು ಖಂಡಿಸುತ್ತೇವೆ ಎಂದು ಸುಭೋದ್ ಶೆಟ್ಟಿ ಮೇನಾಲ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಹ ಸಂಚಾಲಕ ನಿಕೇಶ್ ಉಬರಡ್ಕ, ವಿ.ಹೆಚ್.ಪಿ.ಕಾರ್ಯದರ್ಶಿ ನವೀನ್ ಎಲಿಮಲೆ, ಹರಿಪ್ರಸಾದ್ ಎಲಿಮಲೆ, ಭಾರತೀಯ ಮಜ್ದೂರ್ ಸಂಘದ ಅಧ್ಯಕ್ಷ ಮಧುಸೂಧನ್, ಸನತ್ ಚೊಕ್ಕಾಡಿ, ಪ್ರಕಾಶ್ ಪಿ.ಎಸ್ ಉಪಸ್ಥಿತರಿದ್ದರು.