ಇಬ್ಬರು ಮಹಿಳಾ ಹೆಡ್ ಕಾನ್‌ಸ್ಟೇಬಲ್‌ಗಳು ವರ್ಗಾವಣೆ
ಸುಳ್ಯ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್ ತನಿಖಾ ವಿಭಾಗದ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದ ಅನು ಕುಮಾರ್ ಜಿ ಎಸ್ ರವರು ಹೆಡ್ ಕಾನ್‌ಸ್ಟೇಬಲ್ ಆಗಿ ಮುಂಬಡ್ತಿ ಹೊಂದಿದ್ದು ಸುಳ್ಯ ಠಾಣೆಯಲ್ಲಿಯೇ ಕರ್ತವ್ಯವನ್ನು ಮುಂದುವರಿಸಲಿದ್ದಾರೆ.
ಠಾಣೆಯಲ್ಲಿ ಮಹಿಳಾ ಹೆಡ್ ಕಾನ್‌ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ಇಬ್ಬರು ಮಹಿಳಾ ಹೆಡ್ ಕಾನ್‌ಸ್ಟೇಬಲ್ ಶ್ರೀಮತಿ ಮಮತಾರವರು ಪುತ್ತೂರು ಮಹಿಳಾ ಠಾಣೆಗೆ ವರ್ಗಾವಣೆಗೊಂಡಿದ್ದು ಶ್ರೀಮತಿ ಧನಲಕ್ಷ್ಮಿಯವರು ಸುಬ್ರಹ್ಮಣ್ಯ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
ಇವರನ್ನು ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕರುಗಳಾದ ಸಂತೋಷ್ ಬಿ ಪಿ ಹಾಗೂ ಶ್ರೀಮತಿ ಸರಸ್ವತಿಯವರು ವರ್ಗಾವಣೆ ಪತ್ರವನ್ನು ನೀಡಿ ಬೀಳ್ಕೊಟ್ಟರು.