ಜಾಲ್ಸೂರು: ಕದಿಕಡ್ಕ ಸ.ಹಿ.ಪ್ರಾ.ಶಾಲಾ ನೂತನ ಹಳೆವಿದ್ಯಾರ್ಥಿ ಸಂಘ ರಚನೆ

0

ಅಧ್ಯಕ್ಷರಾಗಿ ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಬಾಬು ಆಯ್ಕೆ

ಜಾಲ್ಸೂರು ಗ್ರಾಮದ ಕದಿಕಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಹಳೆವಿದ್ಯಾರ್ಥಿ ಸಂಘವು ರಚನೆಗೊಂಡಿದ್ದು, ಅಧ್ಯಕ್ಷರಾಗಿ ಜಾಲ್ಸೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಎಂ. ಬಾಬು ಕದಿಕಡ್ಕ ಅವರು ಆಯ್ಕೆಯಾಗಿದ್ದಾರೆ.

ಪ್ರದಾನ ಕಾರ್ಯದರ್ಶಿಯಾಗಿ ಸಿ‌.ಎಚ್. ಅಬ್ದುಲ್ ಖಾದರ್ ಸಣ್ಣಕದಿಕೆ, ಕೋಶಾಧಿಕಾರಿಯಾಗಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಾರಿಜ, ಉಪಾಧ್ಯಕ್ಷರಾಗಿ ಹರೀಶ್ ಬೇರ್ಪಡ್ಕ, ಜೊತೆ ಕಾರ್ಯದರ್ಶಿಯಾಗಿ ಚಂದ್ರಶೇಖರ ಕಾಳಮನೆ ಆಯ್ಕೆಯಾಗಿದ್ದಾರೆ.
ಉಳಿದಂತೆ ಸುಮಾರು ಇಪ್ಪತ್ತೆರಡು ಮಂದಿ ಸಮಿತಿ ಸದಸ್ಯರುಗಳಾಗಿ ಆಯ್ಕೆಯಾಗಿದ್ದಾರೆ.