ಗೌರಿತಾಳಿಗೆ ಗೋಲ್ಡನ್ ಕಿಡ್-2023 ಪ್ರಶಸ್ತಿ

0

ಜಾಕಿ ಬುಕ್ ಆಫ್ ವಿಶ್ವದಾಖಲೆ ಸಂಸ್ಥೆಯವರು ಕೊಡಮಾಡುವ ಜಾಕಿ ಅವಾರ್ಡ್ಸ್ ಗೋಲ್ಡನ್ ಕಿಡ್- 2023 ಯೋಗರತ್ನ ಪ್ರಶಸ್ತಿಗೆ ಯೋಗ ಪಟು ಗೌರಿತಾ ಭಾಜನರಾಗಿದ್ದಾಳೆ. ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಗೌರಿತಾ ಡಾ. ಗೌತಮ್ ಮತ್ತು ಡಾ. ರಾಜೇಶ್ವರಿ ರವರ ಪುತ್ರಿ. ಈಕೆ ಯೋಗಾಭ್ಯಾಸವನ್ನು ಯೋಗ ಗುರು ಶರತ್ ಮರ್ಗಿಲಡ್ಕ ರವರಲ್ಲಿ ಅಮರ ಯೋಗ ಕೇಂದ್ರ ಗುತ್ತಿಗಾರಿನಲ್ಲಿ ಪಡೆಯುತ್ತಿದ್ದಾಳೆ.