ಕಳಂಜ ಗ್ರಾಮದ ಜನತಾ ಕಾಲನಿ ನಿವಾಸಿ ತಿಮ್ಮಪ್ಪ ಗೌಡ ಶ್ರೀಮತಿ ಜಯಲಕ್ಷ್ಮಿ ದಂಪತಿಗೆ ಪಂಚಾಯತ್ ಮುಂದಾಳತ್ವದಲ್ಲಿ ಮನೆ ನಿರ್ಮಾಣಕ್ಕೆ ಮುಹೂರ್ತ ಕಾರ್ಯ ನ. 19ರಂದು ನಡೆಯಿತು. ಕಳಂಜ ಜನಾತಾ ಕಾಲನಿ ನಿವಾಸಿ ತಿಮ್ಮಪ್ಪ ಗೌಡರು ವಾಸವಾಗಿದ್ದ ಮನೆ ಕಳೆದೆರಡು ವರ್ಷಗಳ ಹಿಂದೆ ಮುರಿದು ಬೀಳುವ ಹಂತದಲ್ಲಿತ್ತು. ಈ ಕುಟುಂಬವನ್ನು ಪಂಚಾಯತ್ ನವರು ಕೋಟೆಮುಂಡುಗಾರಿನ ಪಂಚಾಯತ್ ನ ಹಳೆ ಕಟ್ಟಡಕ್ಕೆ ಸ್ಥಳಾಂತರಿಸಿದ್ದರು. ಇದೀಗ ಇವರಿಗೆ ಸರಕಾರದ ಆಶ್ರಯ ಯೋಜನೆಯಲ್ಲಿ ಮನೆ ಮಂಜೂರಾಗಿದ್ದರೂ, ಮನೆ ನಿರ್ಮಿಸುವಷ್ಟು ಶಕ್ತರಿಲ್ಲದ ಕುಟುಂಬಕ್ಕೆ ಪಂಚಾಯತ್ ಸದಸ್ಯರು ಸ್ಥಳೀಯರ ಮತ್ತು ಸಂಘ ಸಂಸ್ಥೆಗಳ ಸಹಕಾರವನ್ನು ಪಡೆದು ಮನೆ ನಿರ್ಮಾಣಕ್ಕೆ ಮುಂದಾಗಿದ್ದು, ಇಂದು ಮುಹೂರ್ತ ಕಾರ್ಯ ನಡೆಯಿತು. ಈ ಸಂದರ್ಭದಲ್ಲಿ ಕಳಂಜ ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ ಬೇರಿಕೆ, ಉಪಾಧ್ಯಕ್ಷೆ ಶ್ರೀಮತಿ ಪ್ರೇಮಲತಾ ಮಣಿಮಜಲು, ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಪ್ರಶಾಂತ್ ಕುಮಾರ್, ಮಾಜಿ ಉಪಾಧ್ಯಕ್ಷ, ಹಾಲಿ ಸದಸ್ಯ ಗಣೇಶ್ ರೈ ಕಳಂಜ, ಸದಸ್ಯರಾದ ಸುಧಾ ವಾರಣಾಶಿ, ಕಮಲ ಕಿಲಂಗೋಡಿ, ಬೆಳ್ಳಾರೆ ರೋಟರಿ ಕ್ಲಬ್ ಸದಸ್ಯ, ಮಾಜಿ ಅಧ್ಯಕ್ಷ ಅನಂತಕೃಷ್ಣ ತಂಟೆಪ್ಪಾಡಿ, ಮಾಜಿ ಉಪಾಧ್ಯಕ್ಷ ರವಿಪ್ರಸಾದ್ ರೈ ಕಳಂಜ, ವಾಸ್ತು ಶಿಲ್ಪಿ ವಾಸುದೇವ ಆಚಾರ್ಯ, ಸ್ಥಳೀಯರಾದ ನಾರಾಯಣ ನಾಯ್ಕ, ಮೇಸ್ತ್ರಿ ರಘುನಾಥ ರೈ ಅಂಕತ್ತಡ್ಕ, ಸತ್ಯನಾರಾಯಣ ಬೇರಿಕೆ, ಶಾಂತಮೂರ್ತಿ ಕಿಲಂಗೋಡಿ, ಮಾಜಿ ಅಧ್ಯಕ್ಷೆ ಶ್ರೀಮತಿ ಯಶೋಧ ಮಣಿಮಜಲು, ಶಿವಪ್ರಸಾದ್ ಕಳಂಜ, ಲಕ್ಷ್ಮಣ ಗೌಡ ಬೇರಿಕೆ ಮತ್ತು ತಿಮ್ಮಪ್ಪ ಗೌಡರ ಮಕ್ಕಳಾದ ದೀಕ್ಷಿತ, ಚಂದ್ರಶೇಖರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Home ಪ್ರಚಲಿತ ಸುದ್ದಿ ಕಳಂಜ: ತಿಮ್ಮಪ್ಪ ಗೌಡ ಶ್ರೀಮತಿ ಜಯಲಕ್ಷ್ಮಿ ದಂಪತಿಗೆ ಪಂಚಾಯತ್ ಮುಂದಾಳತ್ವದಲ್ಲಿ ಮನೆ ನಿರ್ಮಾಣಕ್ಕೆ ಮುಹೂರ್ತ