ಸುಳ್ಯದ ಪುರಭವನ ಬಾಡಿಗೆ ಪಡೆದವರೇ ಸ್ವಚ್ಛಗೊಳಿಸಬೇಕು..?

0

ಮದುವೆಗೆಂದು ಹಾಲ್ ಬುಕ್ ಮಾಡಿದ ವಧುವಿನ ಕಡೆಯವರು ಹಿಂದಿನ ದಿನ ಹಾಲ್‌ಗೆ ಹೋಗಿ ನೋಡಿದಾಗ ಸಭಾಭವನ ಪೂರ್ತಿ ಧೂಳು, ಕಸಗಳಿಂದ ಸ್ವಚ್ಛವಿಲ್ಲದ ಪರಿಣಾಮ ವಧುವಿನ ಕಡೆಯವರೇ ನೀರು ಹಾಕಿ ತೊಳೆದು ಸ್ವಚ್ಛಗೊಳಿಸಿದ ಘಟನೆ ನ.18ರಂದು ವರದಿಯಾಗಿದೆ.


ಸುಳ್ಯ ನಗರ ಪಂಚಾಯತ್ ಆಡಳಿತದಲ್ಲಿರುವ ಕೆ.ವಿ.ಜಿ. ಪುರಭವನ ವಿಸ್ತಾರವಾಗಿದೆ. ೧ ಸಾವಿರ ಜನರು ಕುಳಿತುಕೊಳ್ಳುವ ವ್ಯವಸ್ಥೆಯೊಂದಿಗೆ, ಪಾರ್ಕಿಂಗ್, ಅಡುಗೆ ಕೊಠಡಿ ಹೀಗೆ ಎಲ್ಲ ಸೌಕರ್ಯವಿದೆ. ಆದರೆ ಸಭಾಂಗಣ ಮೈಂಟೆನೆನ್ಸ್ ನಗರ ಪಂಚಾಯತ್ ಮಾಡುತ್ತಿಲ್ಲ. ನಗರ ಪಂಚಾಯತ್‌ನ ಹಲವು ಸಭೆಗಳಲ್ಲಿ ಪಂಚಾಯತ್ ಸದಸ್ಯರೇ ಈ ಕುರಿತು ಅಸಮಾಧಾನ ವ್ಯಕ್ತ ಪಡಿಸಿರುವ ಘಟನೆಯೂ ಆಗಿತ್ತು.


ಪುರಭವನದಲ್ಲಿ ೨೦೨೩-ನ ೧೯ರಂದು ಸುಳ್ಯ ಬಂಗ್ಲೆಗುಡ್ಡೆಯ ಒಂದು ಮದುವೆ ನಡೆಯುವುದಿತ್ತು. ಅದಕ್ಕಾಗಿ ಸಭಾಂಗಣ ಬುಕ್ ಮಾಡಿದ ಮನೆಯವರು ೯ ಸಾವಿರ ರೂ.ಬಾಡಿಗೆಯನ್ನೂ ನೀಡಿದ್ದರು. ನ.೧೮ರಂದು ಸಂಜೆ ಹಾಲ್‌ಗೆ ವಧುವಿನ ಕಡೆಯವರು ಹೋದಾಗ ಹಾಲ್‌ನ ಒಳಗೆ ಧೂಳು ತುಂಬಿತ್ತು. ಅಲ್ಲಲ್ಲಿ ಕಸಗಳು ಇತ್ತು. ಏನು ಮಾಡುವುದೆಂದು ಯೋಚಿಸಿದ ಮದುವೆ ಮನೆಯವರು ನಗರ ಪಂಚಾಯತ್‌ನವರಿಗೆ ತಿಳಿಸಿದರೂ ಅವರು ಸ್ಪಂದನೆ ನೀಡಿರಲಿಲ್ಲವೆಂದು ಹೇಳಲಾಗಿದೆ. ನ.೧೯ ಮದುವೆ ಆಗಬೇಕಾಗಿರುವುದರಿಂದ ವಧುವಿನ ಕಡೆಯ ಸುಮಾರು ೧೫ ರಿಂದ ೨೦ ಮಂದಿ ಯುವಕರು ಸೇರಿಕೊಂಡು ಹಾಲ್ ನ್ನು ಸೋಪ್ ನೀರು ಹಾಕಿ ಸ್ವಚ್ಛಗೊಳಿಸಿದರು. ಶೌಚಾಯವೂ ಕೂಡಾ ಸ್ವಚ್ಛವಿಲ್ಲದೆ, ದುರ್ನಾತ ಬರುತಿತ್ತು. ಅದನ್ನೂ ಕೂಡಾ ತೊಳೆದು ಸ್ವಚ್ಛತೆ ಮಾಡಿದರು.

ನ.೧೯ರಂದು ಸಹೋದರಿಯ ಮದುವೆ ನಿಗದಿ ಮಾಡಿ ಪುರಭವನ ಬುಕ್ ಮಾಡಿದ್ದೆವು. ೯ ಸಾವಿರ ರೂ ಕೊಟ್ಟಿzವೆ. ನ.೧೮ರಂದು ಸಂಜೆ ಹಾಲ್ ಗೆ ಹೋಗಿ ನೋಡಿದಾಗ ಧೂಳು, ಕಸಗಳು ತುಂಬಿತ್ತು. ಸ್ವಚ್ಛಗೊಳಿಸದೇ ಕಾರ್ಯಕ್ರಮ ಮಾಡುವ ಹಾಗಿರಲಿಲ್ಲ. ನ.ಪಂ. ನವರಿಗೆ ಹೇಳಿದರೂ ಸ್ಪಂದನೆ ಸಿಗದಿದ್ದುದರಿಂದ, ನಾವೇ ಸುಮಾರು ೧೫ ಕ್ಕೂ ಹೆಚ್ಚು ಮಂದಿ ಸೇರಿ ಹಾಲ್ ಸ್ವಚ್ಛಗೊಳಿಸಿzವೆ. ನಗರ ಆಡಳಿತದ ಸಭಾಂಗಣವನ್ನು ಈ ರೀತಿ ಮೈಂಟೆನೆನ್ಸ್ ಮಾಡದೇ ಹಾಗೆ ಬಿಡುವುದು ದುರಾದೃಷ್ಟ. ಆಡಳಿತ ನಡೆಸುವವರು ಮತ್ತು ಅಧಿಕಾರಿಗಳು ಈ ಕುರಿತು ಗಮನ ಹರಿಸಬೇಕು. -ಮಹೇಶ್ ಬೀರಮಂಗಲ